ಶನಿವಾರ, ಮೇ 21, 2022
19 °C

ಕಬ್ಬಿಣದ ಸುತ್ತಿಗೆಯಿಂದ ಅತ್ತೆ ಕೊಲೆ: ಸೊಸೆ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಸೊಸೆಯೇ ಅತ್ತೆಯನ್ನು ಕಬ್ಬಿಣದ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾಳೆ.

ರುದ್ರಮ್ಮ (60) ಕೊಲೆಯಾದವರು. ಇವರ ಸೊಸೆ ಮುದ್ದಕ್ಕ ಕೊಲೆ ಮಾಡಿದಾಕೆ. ಪೊಲೀಸರು ಮುದ್ದಕ್ಕಳನ್ನು ಬಂಧಿಸಿದ್ದಾರೆ.

ಸೋಮಗುದ್ದು ಗ್ರಾಮದವಳಾದ ಮುದ್ದಕ್ಕಳನ್ನು ರುದ್ರಮ್ಮ ಅವರ ಪುತ್ರ ಸಂಪತ್‌ಕುಮಾರ್ ಜೊತೆ ಹಲವು ವರ್ಷಗಳ ಹಿಂದೆ ವಿವಾಹ ಮಾಡಲಾಗಿತ್ತು. ಸಂಸಾರದಲ್ಲಿ ಹೊಂದಾಣಿಕೆ ಇಲ್ಲದೇ ಇರುವುದರಿಂದ ಈ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. 

ನಿರಂತರ ಜಗಳದಿಂದ ಬೇಸತ್ತ ಸೊಸೆ ಮುದ್ದಕ್ಕ ‘ಹೀಗೆ ಮಾಡುತ್ತಿರು. ಒಂದಲ್ಲ ಒಂದು ದಿನ ನಿನಗೆ ಗತಿ ಕಾಣಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದಳು.

ಶನಿವಾರ ರಾತ್ರಿ 11ರ ನಂತರ ಮಾವ ಕೆಂಚಪ್ಪ ಮತ್ತು ಮಗ ಸಂಪತ್‍ಕುಮಾರ್ ಇಬ್ಬರು ಪ್ರತ್ಯೇಕ ಕೊಠಡಿಯಲ್ಲಿ ಮಲಗಿದ್ದರು. ಅತ್ತೆ ರುದ್ರಮ್ಮ ಮತ್ತು ಸೊಸೆ ಮುದ್ದಕ್ಕ ಮತ್ತು ಮಗ ಅಭಿಷೇಕ ಸೇರಿ ಮೂವರು ಒಂದೇ ಕೊಠಡಿಯಲ್ಲಿ ಮಲಗಿದ್ದರು. ಮುದ್ದಕ್ಕ ಭಾನುವಾರ ಬೆಳಿಗ್ಗೆ 3 ಗಂಟೆಯಲ್ಲಿ ಗಾಢ ನಿದ್ರೆಯಲ್ಲಿ ಮಲಗಿದ್ದ ಅತ್ತೆ ರುದ್ರಮ್ಮ ಅವರ ತಲೆ ಹಾಗೂ ಕಿವಿಗೆ ರಕ್ತ ಸೋರುವ ಹಾಗೆ ಕಬ್ಬಿಣದ ಸುತ್ತಿಗೆಯಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾಳೆ.

ರುದ್ರಮ್ಮ ಕಿರುಚಿದ ಶಬ್ಧ ಕೇಳಿದ ಶಬ್ದ ಕೇಳಿದ ಪತಿ ಕೆಂಚಪ್ಪ ಹೋಗಿ ನೋಡಿದಾಗ ಪತ್ನಿಯ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ಗಾಬರಿಗೊಂಡು ಮೂಕಸ್ಮಿತರಾದರು.

ಕೊಲೆಯ ವಿಚಾರವನ್ನು ಗ್ರಾಮದ ಮಂಜಣ್ಣ ಅವರಿಗೆ ತಿಳಿಸಿದ್ದು, ಸೊಸೆಯ ವಿರುದ್ಧ ಚಳ್ಳಕೆರೆ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ’ ಎಂದು ಪಿಎಸ್‍ಐ ಮಹೇಶ್‍ಗೌಡ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು