ಚಿತ್ರದುರ್ಗ: ದೆಹಲಿಯಲ್ಲಿ ಮಾರ್ಚ್ 23 ರಿಂದ 27 ರವರೆಗೆ ನಡೆಯುವ ರಾಷ್ಟ್ರಮಟ್ಟದ 43 ನೇ ಹ್ಯಾಂಡ್‍ಬಾಲ್ ಚಾಂಪಿಯನ್‍ಶಿಪ್‌ಗೆ ತೆರಳಿದ ಕ್ರೀಡಾಪಟುಗಳನ್ನು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹರಸಿದರು.

ಜಿಲ್ಲಾ ಹ್ಯಾಂಡ್ ಬಾಲ್ ಸಂಸ್ಥೆ ಅಧ್ಯಕ್ಷರೂ ಆಗಿರುವ ಸ್ವಾಮೀಜಿ, ವಿಜೇತರಾಗಿ ಬರುವಂತೆ ಶುಭಕೋರಿದರು. 20 ವರ್ಷದ ಒಳಗಿನ 16 ಕ್ರೀಡಾಪಟುಗಳು ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ನಗರದ ವಿ.ಪಿ.ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹತ್ತು ದಿನಗಳಿಂದ ಇವರು ತರಬೇತಿ ಪಡೆದಿದ್ದಾರೆ.

‘ಚಾಂಪಿಯನ್‍ಶಿಪ್‌ಗೆ ಆಯ್ಕೆಯಾಗಿರುವುದು ಸಂತೋಷದ ಸಂಗತಿ. ಮಾನಸಿಕ ಮತ್ತು ದೈಹಿಕ ಸಮತೋಲನವನ್ನು ಕಳೆದುಕೊಳ್ಳದೇ ಆಟವಾಡಿ. ಏಕಾಗ್ರತೆ, ಎಚ್ಚರಿಕೆ, ಗಮನವಿದ್ದಾಗ ಮಾತ್ರ ಯಾವುದೇ ಕ್ರೀಡೆಯಲ್ಲಿ ಗೆಲವು ಸಾಧಿಸಲು ಸಾಧ್ಯ’ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಲಹೆ ನೀಡಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೆಂಕಟಪತಿ, ನಿವೃತ್ತ ದೈಹಿಕ ಶಿಕ್ಷಣ ಅಧೀಕ್ಷಕ ಜಯಣ್ಣ, ಜಿಲ್ಲಾ ಹ್ಯಾಂಡ್‍ಬಾಲ್ ಸಂಸ್ಥೆ ಕಾರ್ಯಾಧ್ಯಕ್ಷ ಕೆ.ಎಚ್. ಶಿವರಾಂ, ಸಂಘಟನಾ ಕಾರ್ಯದರ್ಶಿ ಪ್ರೇಮಾನಂದ್, ಅಂತರಾಷ್ಟ್ರೀಯ ಕ್ರೀಡಾಪಟು ನಾಗಭೂಷಣ್, ನಿವೃತ್ತ ದೈಹಿಕ ಶಿಕ್ಷಕ ಲೋಹಿತಾಶ್ವ, ರವಿ ಮಲ್ಲಾಪುರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.