ನಾಯಕನಹಟ್ಟಿ: ಪ್ಲಾಸ್ಟಿಕ್ ಕುರ್ಚಿಗಳು, ಮಂಚವನ್ನು ಹೋಲುವ ಕಡಪ ಕಲ್ಲಿನ ಕಟ್ಟೆಗಳು, ಮಂದವಾದ ಗಾಳಿ ಮತ್ತು ಬೆಳಕಿನ ವ್ಯವಸ್ಥೆ, ಶೌಚಾಲಯಗಳ, ಕೊಠಡಿಗಳ ದುರ್ವಾಸನೆ... ಇಷ್ಟೆಲ್ಲ ಕೊರತೆ ಎದುರಿಸುತ್ತಿರುವುದು ಗುರುತಿಪ್ಪೇರುದ್ರಸ್ವಾಮಿ ದೇವಾಲಯದ ಅತಿಥಿಗೃಹಗಳು.

ಮಧ್ಯ ಕರ್ನಾಟಕ ಭಾಗದಲ್ಲಿ ಇತಿಹಾಸ ಪ್ರಸಿದ್ಧಿ ಪಡೆದಿರುವ ಗುರುತಿಪ್ಪೇರುದ್ರಸ್ವಾಮಿ ದೇವಾಲಯವು ರಾಜ್ಯ ಸೇರಿ ಹೊರರಾಜ್ಯಗಳಲ್ಲೂ ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದೆ. ವರ್ಷಕ್ಕೆ 12ರಿಂದ 15ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವರ್ಷದ ಎಲ್ಲ ದಿನಮಾನಗಳಲ್ಲೂ ಪೂಜೆ, ಉತ್ಸವ, ರಥೋತ್ಸವ ಸೇರಿ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳು ನಡೆಯುತ್ತವೆ. ಆ ಮೂಲಕ ವಾರ್ಷಿಕ ₹ 3 ಕೋಟಿಯಿಂದ ₹ 4 ಕೋಟಿಯಷ್ಟು ಆದಾಯ ಗಳಿಸುತ್ತಿದೆ.

ಹಾಗಾಗಿ ರಾಜ್ಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಲ್ಲಿ ನಾಯಕನಹಟ್ಟಿ ಗುರುತಿಪೇರುದ್ರಸ್ವಾಮಿ ಒಳಮಠ ಮತ್ತು ಹೊರಮಠ ದೇವಾಲಯಗಳು ‘ಎ’ ಗ್ರೇಡ್ ಮಾನ್ಯತೆ ಪಡೆದಿವೆ. ದೇವಾಲಯದ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳಲು ಸರ್ಕಾರ ತಹಶೀಲ್ದಾರ್ ಗ್ರೇಡ್ ಅಧಿಕಾರಿಯನ್ನು ಕಾರ್ಯ ನಿರ್ವಹಣಾಧಿಕಾರಿಯನ್ನಾಗಿ ನೇಮಿಸಿದೆ. ಜತೆಗೆ ದೇವಾಲಯದ ಮೇಲುಸ್ತುವಾರಿಯನ್ನು ನೋಡಿಕೊಳ್ಳಲು ದೈವಸ್ಥರು, ಬಾಬುದಾರರು, ಗ್ರಾಮಸ್ಥರನ್ನು ಒಳಗೊಂಡ ವ್ಯವಸ್ಥಾಪನಾ ಸಮಿತಿಯನ್ನು ಸರ್ಕಾರ ನಾಮನಿರ್ದೇಶನ ಮಾಡುವ ವ್ಯವಸ್ಥೆ ಇದೆ. 45ಕ್ಕೂ ಹೆಚ್ಚು ಸಿಬ್ಬಂದಿ ವಿವಿಧ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.

ದೇವಾಲಯದಲ್ಲಿ ಅರ್ಚನೆ, ಪೂಜೆ, ಉತ್ಸವಗಳು ಸಂಪ್ರದಾಯದಂತೆ ಜರುಗುತ್ತಿವೆ. ಭಕ್ತರಿಗಾಗಿ ಶುದ್ಧ ಕುಡಿಯುವ ನೀರು, ಅನ್ನದಾಸೋಹ, ಶೌಚಾಲಯಗಳ ವ್ಯವಸ್ಥೆ ಇದೆ. ಆದರೆ, ದೇವಾಲಯಕ್ಕೆ ಸಂಬಂಧಪಟ್ಟ ಕೆಲವು ಕಟ್ಟಡಗಳಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಬೇಕಿದೆ ಪೀಠೋಪಕರಣಗಳ ವ್ಯವಸ್ಥೆ:

2004ರಲ್ಲಿ ಪಟ್ಟಣದ ಒಳಮಠ ಮತ್ತು ಹೊರಮಠ ದೇವಾಲಯಗಳ ಬಳಿ ತಲಾ ಒಂದೊಂದು ಬೃಹತ್ ಅತಿಥಿಗೃಹ ಸಮುಚ್ಛಯಗಳನ್ನು ನಿರ್ಮಿಸಲಾಗಿದೆ. ಒಳಮಠ ಅತಿಥಿಗೃಹದಲ್ಲಿ 24 ಕೊಠಡಿಗಳು, ಹೊರಮಠ ಅತಿಥಿಗೃಹದಲ್ಲಿ 19 ಕೊಠಡಿಗಳು, ಹೊರಮಠ ಯಾತ್ರಿ ನಿವಾಸದಲ್ಲಿ 6 ಕೊಠಡಿಗಳು ಇವೆ.

2004ರ ವೇಳೆಗೆ ಅಂದು ಸರಬರಾಜು ಮಾಡಿದ್ದ ಪೀಠೋಪಕರಣಗಳು ಆಧುನಿಕವಾಗಿದ್ದವು. ಆದರೆ, ಕಾಲಕಳೆದಂತೆ ಅವು ಶಿಥಿಲಾವಸ್ಥೆ ತಲುಪಿವೆ. ಹೊರಮಠದ ಅತಿಥಿಗೃಹದ ಕೊಠಡಿಗಳಲ್ಲಿ ಸೂಕ್ತವಾದ ಮಂಚಗಳು, ಹಾಸಿಗೆಗಳು ಇಲ್ಲವಾಗಿವೆ. ಮಂಚದ ಬದಲಿಗೆ ಹಳೆಯ ಕಾಲದ ಕಲ್ಲಿನ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಈ ಕೊಠಡಿಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆಯಾಗಲೀ, ಗಾಳಿಯ ವ್ಯವಸ್ಥೆಯಾಗಲೀ ಇಲ್ಲ. ಕತ್ತಲಾಯಿತೆಂದರೆ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತದೆ. ಹಾಗೇ ಈ ಅತಿಥಿಗೃಹಗಳ ಕೊಠಡಿಯೊಳಗೆ ಪ್ರವೇಶವಾಗುತ್ತಿದ್ದಂತೆ ಕಮಟವಾಸನೆ ಮೂಗಿಗೆ ರಾಚುತ್ತದೆ.

ದೇವರಿಗೆ ಹರಕೆ ತೀರಿಸಲು ದೇವಾಲಯಕ್ಕೆ ಬರುವ ಭಕ್ತರು, ದೇವಾಲಯದ ಸನ್ನಿಧಿಯಲ್ಲಿ ವಿಶ್ರಾಂತಿ ಪಡೆಯಬೇಕು ಎಂದು ಕೊಠಡಿಗಳಿಗೆ ತೆರಳಿದರೆ ಹಲವು ಸಮಸ್ಯೆಗಳ ಮಧ್ಯೆಯೇ ಒಲ್ಲದ ಮನಸ್ಸಿನಿಂದ ದೇವರ ಮೇಲಿನ ಗೌರವಕ್ಕೆ ತಂಗುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ, ಪ್ರತಿ ಕೊಠಡಿಗಳಿಗೂ ಪೀಠೋಪಕರಣಗಳ ಹೈಟೆಕ್ ಸ್ಪರ್ಶ ಅಗತ್ಯವಾಗಿದೆ. ಹೈಟೆಕ್ ವುಡನ್ಮಂಚಗಳು, ಶುಭ್ರವಾದ ಹಾಸಿಗೆ– ಹೊದಿಕೆಗಳು, ಉತ್ತಮ ಶೌಚಾಲಯಗಳ ವ್ಯವಸ್ಥೆ ಆಗಬೇಕಿದೆ.

‘ಪ್ರಸ್ತುತ ದೇವಾಲಯದ ಮೇಲುಸ್ತುವಾರಿಯನ್ನು ನೋಡಿಕೊಳ್ಳುವ ವ್ಯವಸ್ಥಾಪನಾ ಸಮಿತಿ ಇಲ್ಲ. ಬದಲಿಗೆ ಪ್ರಭಾರ ಜಿಲ್ಲಾಧಿಕಾರಿಯೇ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ . ದೂರದೂರುಗಳಿಂದ ಬರುವ ಭಕ್ತರಿಗೆ ರಾತ್ರಿವೇಳೆ ತಂಗಲು ಮತ್ತು ವಿಶ್ರಾಂತಿ ಪಡೆಯಲು ಸುಸಜ್ಜಿತವಾದ ಕೊಠಡಿಗಳ ಪುನರ್ ನಿರ್ಮಾಣಕ್ಕೆ ಜಿಲ್ಲಾಡಳಿತ ಮತ್ತು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮುಂದಾಗಬೇಕು’ ಎಂದು ಗ್ರಾಮಸ್ಥರಾದ ಪಿ.ರುದ್ರೇಶ, ತಿಪ್ಪೇಸ್ವಾಮಿ, ನಿರಂಜನ್, ಟಿ.ರಮೇಶ್ ಒತ್ತಾಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.