ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಂಪುರ: ಅಭಿವೃದ್ಧಿ ಕಾಣದ ರುದ್ರಭೂಮಿ

ಆಳೆತ್ತರಕ್ಕೆ ಬೆಳೆದಿರುವ ಮುಳ್ಳಿನ ಗಿಡಗಳು; ನೀರಿನ ವ್ಯವಸ್ಥೆ ಇಲ್ಲ
Last Updated 22 ನವೆಂಬರ್ 2022, 7:16 IST
ಅಕ್ಷರ ಗಾತ್ರ

ರವಿಕುಮಾರ್‌ ವಿ.

ಶ್ರೀರಾಂಪುರ: ಸ್ಮಶಾನದ ಒಳಗೆ ಆಳೆತ್ತರಕ್ಕೆ ಬೆಳೆದಿರುವ ಮುಳ್ಳಿನ ಗಿಡಗಳು, ಶವ ಸಂಸ್ಕಾರಕ್ಕೆ ಬಂದ ಜನ ನಿಲ್ಲಲೂ ಜಾಗವಿಲ್ಲದಷ್ಟು ಬೆಳೆದು ನಿಂತಿರುವ ಕುರುಚಲು ಗಿಡಗಳು, ಅಂತ್ಯಕ್ರಿಯೆಗೆ ಬರುವವರು ಕೈಕಾಲು ತೊಳೆದುಕೊಳ್ಳಲು ನೀರಿಲ್ಲ.

ಇದು ಹೋಬಳಿ ಕೇಂದ್ರ ಶ್ರೀರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೂಳಿಹಳ್ಳಿ ರಸ್ತೆ ಹಾಗೂ ಸಾದರಹಳ್ಳಿ ರಸ್ತೆಯಲ್ಲಿರುವ ಹಾಗೂ ಇತರ ಗ್ರಾಮಗಳಲ್ಲಿನ ಸ್ಮಶಾನಗಳ ಸ್ಥಿತಿ.

ಶ್ರೀರಾಂಪುರ ಗ್ರಾಮವು ಹೋಬಳಿ ಕೇಂದ್ರವಾಗಿದ್ದು, 7 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಪರಿಶಿಷ್ಟ ಜಾತಿ ಹಾಗೂ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮುಸ್ಲಿಂ ಸಮುದಾಯದವರಿಗೆ ಪ್ರತ್ಯೇಕ ಸ್ಮಶಾನ ಜಾಗವಿದ್ದು, ಸಮುದಾಯದವರೇ ಸ್ಮಶಾನವನ್ನು ತಕ್ಕಮಟ್ಟಿಗೆ ಅಭಿವೃದ್ಧಿಪಡಿಸಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಹಾಗೂ ಇತರೆ ಸಮುದಾಯದವರು ಗೂಳಿಹಳ್ಳಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಿದರೆ, ಗ್ರಾಮದ ಇತರೆ ಸಮುದಾಯಗಳ ಕೆಲವರು ಹಾಗೂ ತೋಟದಮನೆ, ಭರಮಯ್ಯನಪಾಳ್ಯ ಗ್ರಾಮದವರು ಸಾದರಹಳ್ಳಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ.

ಹೆಗ್ಗೆರೆ ಗ್ರಾಮದ ರಿ.ಸ.ನಂ. 201ರಲ್ಲಿ ಹುಲ್ಲುಬನ್ನಿ ಖರಾಬು ಜಮೀನನ್ನು ಸಾರ್ವಜನಿಕರು ಶವಸಂಸ್ಕಾರಕ್ಕಾಗಿ ಉಪಯೋಗಿಸುತ್ತಿದ್ದು, ಈ ಜಾಗದಲ್ಲೂ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ.
ಗಿಡಗಳನ್ನು ತೆರವುಗೊಳಿಸಿ, ಮೃತರ ಗೌರವಯುತ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

‘ಹೆಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗೆರೆ ಮತ್ತು ವೆಂಗಳಾಪುರ ಗ್ರಾಮಗಳಿಗೆ ತಲಾ 1.20 ಎಕರೆ ಸ್ಮಶಾನ ಜಾಗ ಈಚೆಗೆ ಮಂಜೂರಾಗಿದೆ. ಈ ಜಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ತಂತಿ ಬೇಲಿ ನಿರ್ಮಾಣ ಸೇರಿ ಇತರೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು. ಕಡವಿಗೆರೆ, ಓಬಳಾಪುರ, ದಳವಾಯಿಕಟ್ಟೆ ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಜಾಗ ಮಂಜೂರಾಗಬೇಕಿದೆ’ ಎನ್ನುತ್ತಾರೆ ಹೆಗ್ಗೆರೆ ಗ್ರಾಮ ಪಂಚಾಯಿತಿ ಪಿಡಿಒ ಶ್ರೀಧರ್ ನಾಯ್ಕ.

ಕೋಟ್‌...

ಹೆಗ್ಗೆರೆ ಗ್ರಾಮಕ್ಕೆ 1.20 ಎಕರೆ ಜಮೀನು ಸ್ಮಶಾನಕ್ಕಾಗಿ ಮಂಜೂರಾಗಿದೆ. ಗ್ರಾಮದ ಜನಸಂಖ್ಯೆ ಹೆಚ್ಚಾಗಿದ್ದು, ಭವಿಷ್ಯದ ದೃಷ್ಟಿಯಿಂದ ಇರುವ ಸರ್ಕಾರಿ ಜಾಗದಲ್ಲಿ ಕನಿಷ್ಠ 3 ಎಕರೆ ಜಮೀನನ್ನು ಸ್ಮಶಾನಕ್ಕಾಗಿ ಮೀಸಲಿರಿಸಬೇಕಿದೆ.

ಸುದರ್ಶನ್, ಗ್ರಾಮಸ್ಥ, ಹೆಗ್ಗೆರೆ

ನಿರಂತರವಾಗಿ ಮಳೆ ಬಂದಿದ್ದರಿಂದ ಸ್ಮಶಾನ ಅಭಿವೃದ್ಧಿಗೆ ಹಿನ್ನೆಡೆಯಾಗಿತ್ತು. ಉದ್ಯೋಗ ಖಾತರಿ ಯೋಜನೆ ಅಡಿ ಕ್ರಿಯಾ ಯೋಜನೆ ತಯಾರಿಸಿ ಎಲ್ಲಾ ಸ್ಮಶಾನಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು.

ನಾಗರಾಜ್‍,ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT