ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಳ್ಳಕೆರೆ | ನರೇಗಾ ಯೋಜನೆ: ಪುಷ್ಕರಿಣಿಗೆ ಕಾಯಕಲ್ಪದ ಭಾಗ್ಯ

Published : 13 ಆಗಸ್ಟ್ 2024, 6:08 IST
Last Updated : 13 ಆಗಸ್ಟ್ 2024, 6:08 IST
ಫಾಲೋ ಮಾಡಿ
Comments

ಚಳ್ಳಕೆರೆ: ಕಸ–ಕಡ್ಡಿ, ಪ್ಲಾಸ್ಟಿಕ್ ಕವರ್, ವಾಟರ್ ಬಾಟಲ್, ದೇವರ ಪೂಜೆಗೆ ಬಳಸಿದ ಹೂವು, ತೆಂಗಿನಕಾಯಿ ಮುಂತಾದ ತ್ಯಾಜ್ಯ ತುಂಬಿಕೊಂಡು ಅಸ್ತಿತ್ವ ಕಳೆದುಕೊಳ್ಳುವ ಹಂತದಲ್ಲಿ ಇದ್ದ ತಾಲ್ಲೂಕಿನ ಜಡೇಕುಂಟೆ ಗ್ರಾಮದ ಕಾಟಮದೇವರ ದೇವಸ್ಥಾನದ ಪುರಾತನ ಪುಷ್ಕರಿಣಿಗೆ ಸದ್ಯ ಕಾಯಕಲ್ಪದ ಭಾಗ್ಯ.

ಅಂದಾಜು 700 ವರ್ಷಗಳ ಹಿಂದೆ ನಿರ್ಮಿಸಿದ ಈ ಪುಷ್ಕರಿಣಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಅಭಿವೃದ್ಧಿಗೊಂಡಿದೆ.

ನರೇಗಾದಡಿ ₹ 10 ಲಕ್ಷ ವೆಚ್ಚದಲ್ಲಿ ಪುಷ್ಕರಿಣಿಯಲ್ಲಿ 7-8 ಅಡಿ ತುಂಬಿದ್ದ ಹೂಳು ತೆಗೆಸಲಾಗಿದ್ದು, ಸುತ್ತಲೂ 5-6 ಅಡಿ ಎತ್ತರ ಹೊಸದಾಗಿ ಕಲ್ಲುಕಟ್ಟಡ ನಿರ್ಮಿಸಲಾಗಿದೆ. ಸಂರಕ್ಷಣೆ ಸಲುವಾಗಿ ಪುಷ್ಕರಿಣಿ ಸುತ್ತ ಕಬ್ಬಿಣದ ಸರಳಿನ ಗೇಟ್ ಅಳವಡಿಸಲಾಗಿದೆ.

ಇದರಿಂದ ಜನರ ಆಕರ್ಷಣೆ ಆಗಿರುವ ಈ ಪುಷ್ಕರಿಣಿ ತಾಲ್ಲೂಕಿಗೆ ಮಾದರಿಯಾಗಿದೆ.

ಗ್ರಾಮದಲ್ಲಿ ಪ್ರತಿವರ್ಷ ಶ್ರಾವಣ-ಶಿವರಾತ್ರಿಯಲ್ಲಿ ನಡೆಯುವ ಜಾತ್ರೆಗೆ ಸೇರುವ ಸುತ್ತಲಿನ ಗ್ರಾಮಗಳ ನೂರಾರು ಭಕ್ತರಿಗೆ ಸ್ನಾನ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಪುಷ್ಕರಿಣಿ ಬಳಿ ಪ್ರತ್ಯೇಕ 6 ನಲ್ಲಿಗಳನ್ನು ಅಳವಡಿಸಲಾಗಿದೆ.

ಬಿದ್ದ ಮಳೆನೀರು ಸಂಗ್ರಹದ ಜತೆಗೆ ಅಂತರ್ಜಲ ವೃದ್ಧಿಯಾಗಿದ್ದು, ಶುದ್ಧ ಸಿಹಿ ನೀರು ಸಂಗ್ರಹವಾಗಿದೆ. ದೇವರ ಕಾರ್ಯ ಹಾಗೂ ಕುಡಿಯುಲು ಪುಷ್ಕರಿಣಿಯಲ್ಲಿನ ಸಿಹಿ ತಿಳಿನೀರಿನ ಬಳಕೆಗೆ ಜನರು ಮುಂದಾಗಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮದ ಸ್ವಚ್ಛತೆ, ಸುಸ್ಥಿರ ವಾತಾವರಣ ನಿರ್ಮಿಸುವ ಸಲುವಾಗಿ ಕಸ ವಿಂಗಡಣೆ- ಕಸ ವಿಲೇವಾರಿ, ಪುಷ್ಕರಿರಣಿ ಮುಂತಾದ ಜಲಮೂಲ ಕಾಮಗಾರಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.

ಈ ಭಾಗದಲ್ಲಿ ಅತ್ಯಲ್ಪ ಮಳೆ ಬೀಳುತ್ತಿದ್ದು, ಪ್ರತಿವರ್ಷ ಬೇಸಿಗೆಯಲ್ಲಿ ಜಾನುವಾರು-ಜನರ ಕುಡಿಯುವ ನೀರಿನ ತೀವ್ರತೆ ಹೆಚ್ಚಿರುತ್ತದೆ. ಗ್ರಾಮದ ಆಡಳಿತದ ಸಹಕಾರದಿಂದ ಕೈಗೊಂಡಿದ್ದ ಪುಷ್ಕರಿಣಿ ಪುನಶ್ಚೇತನ ಕಾರ್ಯದಿಂದ ಎಲ್ಲರಿಗೂ ಉಪಯೋಗವಾಗಿದೆ ಎಂದು ಪಿಡಿಒ ದೇವರಾಜ ಸಂತಸ ವ್ಯಕ್ತಪಡಿಸಿದರು.

‘ಪುಷ್ಕರಿಣಿ ನೀರು ದೇವರ ಕಾರ್ಯಕ್ಕೆ ಬಳಕೆಯಾಗುವ ಕಾರಣ ಸದಾ ಸ್ವಚ್ಛತೆ-ಸಂರಕ್ಷಣೆ ಕಡೆಗೆ ಜನರು ಗಮನಹರಿಸಬೇಕು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಮನವಿ ಮಾಡಿದರು.

ನರೇಗಾ ಯೋಜನೆಯಡಿ ಬದು ಕೃಷಿಹೊಂಡ ತೋಟ ನಿರ್ಮಾಣದ ಜತೆಗೆ ಪೂರ್ವಿಕರು ದೂರದೃಷ್ಟಿಯಿಂದ ನಿರ್ಮಿಸಿದ್ದ ಆಯಾ ಗ್ರಾಮದ ಕೆರೆ ಕಟ್ಟೆ ಕಾಲುವೆ ಪುಷ್ಕರಿಣಿಗಳಿಗೆ ಕಾಯಕಲ್ಪ ಕಲ್ಪಿಸಲು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ.
-ಶಶಿಧರ್ ಎಂದು ತಾಲ್ಲೂಕು ಪಂಚಾಯಿತಿ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT