ಶನಿವಾರ, ನವೆಂಬರ್ 28, 2020
19 °C

ಹಬ್ಬದ ದಿನವೇ ₹ 7ಲಕ್ಷ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ದೀಪಾವಳಿ ಹಬ್ಬದ ಲಕ್ಷ್ಮಿದೇವಿ ಪೂಜೆಗಾಗಿ ಹಣ ತೆಗೆದುಕೊಂಡು ಹೋಗುವ ವೇಳೆ ತಾಲ್ಲೂಕಿನ ಭೀಮಸಮುದ್ರ ಗ್ರಾಮದ ಓಂಕಾರಪ್ಪ ಅವರ ಬಳಿ ₹ 7ಲಕ್ಷವನ್ನು ಕಳ್ಳ ದೋಚಿ ಪರಾರಿಯಾಗಿದ್ದಾನೆ.

ಹೊಳಲ್ಕೆರೆ ರಸ್ತೆಯ ಅಂಗಡಿಯೊಂದರ ಬಳಿ ಮಕ್ಕಳಿಗಾಗಿ ಚಾಕಲೇಟ್ ಖರೀದಿಸಲು ಹೋದಾಗ ಕಳ್ಳತನವಾಗಿದೆ. ‘ಬ್ಯಾಂಕ್‌ನಲ್ಲಿ ಹೊಸ ನೋಟು ಪಡೆಯಲು ಹಣ ಬದಲಿಸಿರುವುದನ್ನು ಕಳ್ಳ ನೋಡಿರಬಹುದು. ಹೀಗಾಗಿ ಹಿಂಬಾಲಿಸಿಕೊಂಡು ಬಂದು ಕಳವು ಮಾಡಲಾಗಿದೆ’ ಎಂದು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ.

ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯ ಸೆರೆಯಾಗಿದ್ದು, ಇದನ್ನು ಪೊಲೀಸರು ಪರಿಶೀಲಿಸಿದ್ದಾರೆ. ತನಿಖೆ ಮುಂದುವರೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು