ಧರ್ಮಪುರ: ಈರುಳ್ಳಿ ಬೆಳೆಯು ಕೊಳೆ ಮತ್ತು ಸುಳಿ ರೋಗಕ್ಕೆ ತುತ್ತಾಗಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರು ಆತಂಕಕ್ಕೀಡಾಗಿದ್ದಾರೆ.

ಹಿರಿಯೂರು ತಾಲ್ಲೂಕಿನಲ್ಲಿ ಅಂದಾಜು 4,200 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಧರ್ಮಪುರ ಹೋಬಳಿಯ ಶ್ರವಣಗೆರೆ, ಬೆನಕನಹಳ್ಳಿ, ಚಿಲ್ಲಹಳ್ಳಿ, ಮದ್ದಿಹಳ್ಳಿ, ಹಲಗಲದ್ದಿ, ಧರ್ಮಪುರ, ಸಕ್ಕರ, ಈಶ್ವರಗೆರೆ, ವೇಣುಕಲ್ಲುಗುಡ್ಡ, ಬುರುಡುಕುಂಟೆ, ದೇವರಕೊಟ್ಟ, ಪಿ.ಡಿ.ಕೋಟೆ, ಹರಿಯಬ್ಬೆ ಮತ್ತಿತರ ಗ್ರಾಮಗಳಲ್ಲಿ ಅಧಿಕ ಪ್ರಮಾಣದಲ್ಲಿ ಈರುಳ್ಳಿ ನಾಟಿ ಮಾಡಲಾಗಿದೆ. ಆದರೆ ರೋಗ ಬಾಧೆ ಕಾಡುತ್ತಿದೆ.

ಶ್ರವಣಗೆರೆಯ ರೈತ ಎಂ.ಮಲ್ಲಯ್ಯ 3 ಎಕರೆಯಲ್ಲಿ ಈರುಳ್ಳಿ ನಾಟಿ ಮಾಡಿದ್ದು, ಸಾಕಷ್ಟು ಖರ್ಚು ಮಾಡಿದ್ದಾರೆ. ‘ಇನ್ನೆರೆಡು ವಾರಗಳಲ್ಲಿ ಈರುಳ್ಳಿ ಕೊಯ್ಲು ಮಾಡಬೇಕಿತ್ತು. ಆದರೆ ಕೊಳೆ ರೋಗದಿಂದಾಗಿ ಗೆಡ್ಡೆಗಳು ಕೊಳೆಯುತ್ತಿವೆ. ಕಿತ್ತರೂ ಪ್ರಯೋಜನವಿಲ್ಲ ಎಂಬ ಸ್ಥಿತಿಯಿದ್ದು, ಇಡೀ ಫಸಲು ಕೈತಪ್ಪುವ ಆತಂಕ ಎದುರಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.

‘ಈರುಳ್ಳಿಯು ಕೊಳೆ, ಸುಳಿ ರೋಗಗಳಿಗೆ ತುತ್ತಾದರೆ, ಶೇಂಗಾ ಬೆಳೆಯು ಸುರುಳಿ ಪುಚಿ ರೋಗಕ್ಕೆ ತುತ್ತಾಗಿದೆ. ಮಳೆ ಬಾರದೇ ಬಿತ್ತನೆ ಕುಂಠಿತವಾಗಿದ್ದು ಒಂದು ಸಮಸ್ಯೆ. ಆಗಸ್ಟ್ ತಿಂಗಳಲ್ಲಿ 15 ದಿನಗಳವರೆಗೆ ಬಿಡದೇ ಸುರಿದ ಮಳೆಯಿಂದಾಗಿ ಬೆಳೆ ಸಂಪೂರ್ಣವಾಗಿ ವಿಫಲವಾಗಿರುವುದು ಮತ್ತೊಂದು ಹೊಡೆತ’ ಎಂದು ಬೆನಕನಹಳ್ಳಿಯ ರೈತ ಶಿವಮೂರ್ತಿ ತಿಳಿಸಿದರು.

ಕೊಳೆತ ಸ್ಥಿತಿಯಲ್ಲಿರುವ ಈರುಳ್ಳಿಯನ್ನು ಕೊಯ್ಲು ಮಾಡಿದರೂ ಕಾರ್ಮಿಕರಿಗೆ ಕೂಲಿ ನೀಡಲೂ ಸಾಧ್ಯವಾಗುವುದಿಲ್ಲ. ಅದರ ಬದಲು ಜಮೀನಿಗೆ ಕುರಿಗಳನ್ನು ಮೇಯಲು ಬಿಡುವುದು ಲೇಸು
ಎಂ.ಮಲ್ಲಯ್ಯ, ರೈತ ಶ್ರವಣಗೆರೆ

ಬಿಡದೇ ಮಳೆ ಸುರಿದಿದ್ದರಿಂದ ಸಹಜವಾಗಿ ಕೊಳೆ ರೋಗ ಶುರುವಾಗಿದೆ. ಔಷಧ ಸಿಂಪಡಣೆ ಮಾಡಿ ರೋಗಬಾಧೆಯನ್ನು ಹತೋಟಿಗೆ ತರಬಹುದು
ಎನ್.ಶ್ರೀನಿವಾಸ್, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.