ನಿಮ್ಮ ಕೂಗು ಸತ್ಯದ ನೆಲೆಗಟ್ಟಿನಲ್ಲಿರಲಿ
ಸರ್ಕಾರಿ ನೌಕರರ ಸಂಘ ಪ್ರಬಲವಾಗಿದ್ದು ಸರ್ಕಾರವನ್ನು ಬಗ್ಗಿಸುವ ತಾಕತ್ತು ಹೊಂದಿದೆ ಎಂದು ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನೌಕರರು ಒಂದು ಕೂಗು ಹಾಕಿದರೆ ಸರ್ಕಾರ ನಡುಗಿ ಹೋಗುತ್ತದೆ. ಆದರೆ ನಿಮ್ಮ ಕೂಗು ಸತ್ಯದ ನೆಲೆಗಟ್ಟಿನಲ್ಲಿ ಇರಬೇಕು. ನೌಕರರು ಜನ ಸೇವಕರಂತೆ ಕೆಲಸ ಮಾಡಬೇಕು. ಸರ್ಕಾರಿ ನೌಕರಿಗೆ ಸೇವಾ ಭದ್ರತೆ ಇದ್ದು ಉತ್ತಮ ವೇತನ ಪಡೆಯುತ್ತಾರೆ. ಆದ್ದರಿಂದ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಧರ್ಮ ಸರ್ಕಾರ ಮತ್ತು ಕಾನೂನು ಕೈಜೋಡಿಸಿದಾಗ ಮಾತ್ರ ಜನಸಾಮಾನ್ಯರ ಬದುಕು ಹಸನಾಗುತ್ತದೆ. ಶಾಸಕ ಎಂ. ಚಂದ್ರಪ್ಪ ನಮ್ಮ ಎಲ್ಲಾ ನೀರಾವರಿ ಯೋಜನೆಗಳಿಗೆ ಕೈಜೋಡಿಸುತ್ತಿದ್ದಾರೆ. ಷಡಕ್ಷರಿ ಸರ್ಕಾರಿ ನೌಕರರ ಹಿತ ಕಾಯುವ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.