ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧದ ಪೋಕ್ಸೊ ಪ್ರಕರಣ ಸಂಬಂಧ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಲಯದಲ್ಲಿ ಸೋಮವಾರ ಮೂವರು ಸಂತ್ರಸ್ತೆಯರ ವಿಚಾರಣೆ ನಡೆಯಿತು. 2ನೇ ಸಂತ್ರಸ್ತೆಗೆ ಜ್ವರ ಕಾಡಿದ ಕಾರಣ ಆಕೆಯ ವಿಚಾರಣೆಯನ್ನು ಸೆ.17ಕ್ಕೆ ಮುಂದೂಡಲಾಯಿತು.

ಸ್ವಾಮೀಜಿ ವಿರುದ್ಧದ ಮೊದಲ ಪ್ರಕರಣದ 2ನೇ ಸಂತ್ರಸ್ತೆಯ ವಿಚಾರಣೆ ಬೆಳಗಿನ ಕಲಾಪದಲ್ಲಿ ಸುಗಮವಾಗಿ ನಡೆಯಿತು. ಮಧ್ಯಾಹ್ನ ಆಕೆಗೆ ಅನಾರೋಗ್ಯ ಕಾಡಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಗಂಗಾಧರ ಚನ್ನಬಸಪ್ಪ ಹಡಪದ ಅವರು ವಿಚಾರಣೆಯನ್ನು ಮುಂದೂಡಿದರು.

ಮತ್ತಿಬ್ಬರು ಸಂತ್ರಸ್ತೆಯ ವಿಚಾರಣೆ ಹಾಗೂ ಸಾಕ್ಷಿಗಳು ಪಾಟೀ ಸವಾಲು ಮಂಗಳವಾರ ನಡೆಯಲಿದೆ.

ಸ್ವಾಮೀಜಿ ಪರ ವಕೀಲರಾದ ಸಿ.ವಿ.ನಾಗೇಶ್, ಸಂತ್ರಸ್ತೆ ಪರ ವಕೀಲರಾದ ಶ್ರೀನಿವಾಸ್, ನರಹರಿ, ಸರ್ಕಾರಿ ಅಭಿಯೋಜಕ ಎಚ್. ಆರ್.ಜಗದೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.