ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ವಿವಾದಾತ್ಮಕ ಧ್ವಜ ತೆರವುಗೊಳಿಸಿದ ಪೊಲೀಸರು

Published 10 ಅಕ್ಟೋಬರ್ 2023, 20:13 IST
Last Updated 10 ಅಕ್ಟೋಬರ್ 2023, 20:13 IST
ಅಕ್ಷರ ಗಾತ್ರ

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಇಮ್ಮಾಂಪುರ ಬಂಡೆಹಟ್ಟಿಯಲ್ಲಿ ವಿರೂಪಗೊಳಿಸಿ ಹಾರಿಸಿದ್ದ ತ್ರಿವರ್ಣ ಮಾದರಿ ಧ್ವಜವನ್ನು ಪೊಲೀಸರು ಮಂಗಳವಾರ ತೆರವುಗೊಳಿಸಿದ್ದಾರೆ.

ಮೆಕ್ಕಾ ಹಾಗೂ ದರ್ಗಾ ಚಿತ್ರ ಹೊಂದಿದ ತ್ರಿವರ್ಣ ಮಾದರಿ ಧ್ವಜವನ್ನು ಗ್ರಾಮದ ಹೊರವಲಯದ ಕಂಬಕ್ಕೆ ಕಟ್ಟಲಾಗಿತ್ತು. ಈ ಧ್ವಜದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ವಿವಾದದ ಸ್ವರೂಪ ಪಡೆಯುವ ಮುನ್ಸೂಚನೆ ಅರಿತ ಪೊಲೀಸರು ಧ್ವಜವನ್ನು ತೆರವುಗೊಳಿಸಿದ್ದಾರೆ.

'ತ್ರಿವರ್ಣ ಧ್ವಜ ಹೋಲುವ ಬಾವುಟದ ಮಧ್ಯೆ ಅಶೋಕ ಚಕ್ರ ಇರಲಿಲ್ಲ. ಗ್ರಾಮದ ಕಂಬಕ್ಕೆ ಇದನ್ನು ಕಟ್ಟಿದ್ದು ಮಧ್ಯಾಹ್ನದ ವೇಳೆಗೆ ಗಮನಕ್ಕೆ ಬಂದಿತು. ತಕ್ಷಣ ಇದನ್ನು ತೆರವುಗೊಳಿಸಲಾಗಿದ್ದು, ಯಾರಾದರೂ ದೂರು ನೀಡಿದರೆ ದಾಖಲಿಸಿಕೊಳ್ಳಲಾಗುವುದು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT