ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಂತ್ರಜ್ಞಾನ ಬೆಳೆದಂತೆ ಸಂವೇದನಾಶೀಲತೆ ನಾಶ: ಉಪನ್ಯಾಸಕ ಬಸವರಾಜ್‌ ಕಳವಳ

ಜಿಲ್ಲಾ ಡಯಟ್‌ ಉಪನ್ಯಾಸಕ ಬಸವರಾಜ್‌ ಕಳವಳ
Published : 24 ಆಗಸ್ಟ್ 2024, 14:13 IST
Last Updated : 24 ಆಗಸ್ಟ್ 2024, 14:13 IST
ಫಾಲೋ ಮಾಡಿ
Comments

ಸಿರಿಗೆರೆ: ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಬಳಕೆ ಹೆಚ್ಚಾಗುತ್ತಿದ್ದಂತೆ ಮನುಷ್ಯ ತನ್ನ ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾನೆ ಎಂದು ಜಿಲ್ಲಾ ಡಯಟ್‌ ಉಪನ್ಯಾಸಕ ಬಸವರಾಜ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಸಮೀಪದ ಕಡ್ಲೇಗುದ್ದು ಗ್ರಾಮದ ಇಂದಿರಾಗಾಂಧಿ ವಸತಿಶಾಲೆ ಹಾಗೂ ಆಂಜನೇಯಸ್ವಾಮಿ ಪ್ರೌಢಶಾಲೆ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನಲ್ಲಿ ಸಂವೇದನಾಶೀಲನೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಅವರನ್ನು ರಾಷ್ಟ್ರದ ಉತ್ಪಾದಕ ಶಕ್ತಿಯನ್ನಾಗಿ ರೂಪಿಸಬೇಕು ಎಂದರು.

ಸೂರ್ಯ ಚಲನೆಯ ಮೂಲಕ ಕತ್ತಲು ಬೆಳಕಿನ ಆಟವನ್ನು ಆಡುತ್ತಾನೆ. ಅದನ್ನು ನಾವು ಅಮಾವಾಸ್ಯೆ ಮತ್ತು ಹುಣ್ಣಿಮೆ ಎನ್ನುತ್ತೇವೆ. ಈ ವಿಚಾರದಲ್ಲಿ ಜನರಲ್ಲಿನ ಮೂಢನಂಬಿಕೆಯನ್ನು ಹೋಗಲಾಡಿಸಿ ವೈಚಾರಿಕ ಮನೋಭಾವ ಬೆಳಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದು ಹವ್ಯಾಸಿ ಖಗೋಳಶಾಸ್ತ್ರಜ್ಞ ಎಚ್.‌ಎಸ್.‌ಟಿ. ಸ್ವಾಮಿ ತಿಳಿಸಿದರು.

ಆಂಜನೇಯಸ್ವಾಮಿ ಪ್ರೌಢಶಾಲೆ ಮುಖ್ಯಶಿಕ್ಷಕ ಕೆ.ಎನ್.‌ ಮಹೇಶ್‌, ವಸತಿಶಾಲೆಯ ಪ್ರಾಂಶುಪಾಲ ರಮೇಶ್‌ ವೇದಿಕೆ ಮೇಲಿದ್ದರು. ಶಿಕ್ಷಕ ಟಿ. ಸಿದ್ದಪ್ಪ ಸ್ವಾಗತಿಸಿದರು. ಬಿ. ಜಯಪ್ಪ ವಂದಿಸಿದರು. ಬಿ. ಪ್ರಕಾಶ್‌ ನಿರೂಪಿಸಿದರು.

ಸಿರಿಗೆರೆ ಸಮೀಪದ ಕಡ್ಲೇಗುದ್ದು ಗ್ರಾಮದ ಇಂದಿರಾಗಾಂಧಿ ವಸತಿಯುತ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಸಂದರ್ಭದಲ್ಲಿ ಹವ್ಯಾಸಿ ಖಗೋಳಶಾಸ್ತ್ರಜ್ಞ ಎಚ್‌.ಎಸ್.‌ಟಿ. ಸ್ವಾಮಿ ಮಾತನಾಡಿದರು.
ಸಿರಿಗೆರೆ ಸಮೀಪದ ಕಡ್ಲೇಗುದ್ದು ಗ್ರಾಮದ ಇಂದಿರಾಗಾಂಧಿ ವಸತಿಯುತ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಸಂದರ್ಭದಲ್ಲಿ ಹವ್ಯಾಸಿ ಖಗೋಳಶಾಸ್ತ್ರಜ್ಞ ಎಚ್‌.ಎಸ್.‌ಟಿ. ಸ್ವಾಮಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT