ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ವಸ್ತು ಮಾರಾಟಕ್ಕೆ ವಿರೋಧ

ಕಾಂಗ್ರೆಸ್ ಜಿಲ್ಲಾ ಯುವ ಘಟಕದಿಂದ ಜಾಗೃತಿ
Last Updated 18 ಜೂನ್ 2020, 11:09 IST
ಅಕ್ಷರ ಗಾತ್ರ

ಚಿತ್ರದುರ್ಗ: ಚೀನಾ ವಸ್ತುಗಳನ್ನು ಮಾರಾಟ ಮಾಡಬೇಡಿ ಎಂದು ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಕಾರ್ಯಕರ್ತರು ನಗರದ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಗುರುವಾರ ಕರಪತ್ರ ಹಂಚಿ ಮನವಿ ಮಾಡಿದರು.

ಚೀನಾ ವಸ್ತು ಮಾರಾಟ ಮಾಡದಂತೆ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿ ಮುಂದೆ ಚಾಲನೆ ನೀಡಲಾಯಿತು. ಇದೇ ವೇಳೆ ಮಾರಾಟವನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ಚೀನಾ ಕುತಂತ್ರಕ್ಕೆ ಭಾರತದ ಯೋಧರು ಹುತಾತ್ಮರಾಗಿದ್ದಾರೆ. ಒಂದಿಲ್ಲೊಂದು ರೀತಿ ಷಡ್ಯಂತ್ರ ರೂಪಿಸುವ ಚೀನಾ, ಭಾರತದ ವಿರುದ್ಧ ಹಗೆ ಸಾಧಿಸುತ್ತಿದೆ. ಹೀಗಾಗಿ, ಚೀನಾದಲ್ಲಿ ಉತ್ಪಾದನೆ ಮಾಡುವ ವಸ್ತುಗಳನ್ನು ಬಹಿಷ್ಕರಿಸಿ ಎಂದು ಒತ್ತಾಯಿಸಿದರು.

ಚೀನಾ ಉತ್ಪಾದಿತ ವಸ್ತುಗಳನ್ನು ಭಾರತದಲ್ಲಿ ಮಾರಾಟ ಮಾಡುವುದರಿಂದ ಆ ದೇಶ ಸದೃಢವಾಗಲಿದೆ.ದೇಶದ ಪ್ರಜೆಗಳು ಜಾಗೃತರಾಗಬೇಕು. ಭವ್ಯ ಭಾರತ ಉಳಿಯಬೇಕು. ಅದಕ್ಕಾಗಿ ಚೀನಾ ವಸ್ತುಗಳನ್ನು ಖರೀದಿ ಮಾಡದಿರುವುದೇ ಸೂಕ್ತ. ದೇಶೀಯ ಉತ್ಪನ್ನಗಳನ್ನು ಉತ್ಪಾದಿಸಲು, ನಿರುದ್ಯೋಗಿ ಯುವಸಮೂಹಕ್ಕೆ ಉದ್ಯೋಗ ಸೃಷ್ಟಿಸಲು ಸಾಧ್ಯವಿದೆ ಎಂದರು.

ಮುಖಂಡರಾದ ಮಧುಪಾಲೇಗೌಡ, ಅಶೋಕ್‌ ನಾಯ್ಡು, ಸಂತೋಷ್, ನಿಖಿಲ್‌ಕುಮಾರ್, ಸಂದೀಪ್, ಸೈಯದ್ ಖುದ್ದೂಸ್, ಕರಿಯಪ್ಪ, ಸಾಹೀರ್, ರಫಿ ಇದ್ದರು.

ನವನಿರ್ಮಾಣ ಸೇನೆ ಖಂಡನೆ:ಭಾರತೀಯ ಸೈನಿಕರನ್ನು ಹತ್ಯೆ ಮಾಡಿರುವ ಚೀನಾದ ಕ್ರಮವನ್ನು ಖಂಡಿಸಿ ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು.

ಚೀನಾ ಸೈನಿಕರು ದಾಳಿ ನಡೆಸುವ ಮೂಲಕ ದೇಶದ ಸ್ವಾಭಿಮಾನ ಕೆಣಕಿದ್ದಾರೆ. ಕುತಂತ್ರಿಗಳಿಗೆ ತಕ್ಕ ಪಾಠ ಕಲಿಸಬೇಕಾದರೆ, ಅಲ್ಲಿನ ಯಾವುದೇ ವಸ್ತುಗಳನ್ನು ದೇಶದೊಳಗೆ ಪ್ರವೇಶಿಸದಂತೆ ಎಚ್ಚರವಹಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಮುಖಂಡರಾದ ಕೆ.ಟಿ.ಶಿವಕುಮಾರ್, ಎಂ. ಮಂಜುನಾಥ್, ಕೊಟ್ರೇಶ್, ನಾಗಣ್ಣ, ಹರೀಶ್, ಗೌರಣ್ಣ, ತಿಪ್ಪೇಸ್ವಾಮಿ, ಓಬಳೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT