ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಜಾಜೂರು ‌| ಭಾರಿ ಮಳೆ, ಗಾಳಿ: ತುಂಬಿ ಹರಿದ ಹಳ್ಳ ಕೊಳ್ಳಗಳು

Published : 14 ಆಗಸ್ಟ್ 2024, 15:11 IST
Last Updated : 14 ಆಗಸ್ಟ್ 2024, 15:11 IST
ಫಾಲೋ ಮಾಡಿ
Comments

ಚಿಕ್ಕಜಾಜೂರು: ಬುಧವಾರ ಮುಂಜಾನೆ ಒಂದು ಗಂಟೆಗೂ ಹೆಚ್ಚುಕಾಲ ಭಾರಿ ಮಳೆಯಾಗಿದ್ದರಿಂದ ಬಿ. ದುರ್ಗ ಹೋಬಳಿಯಾದ್ಯಂತ ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ತೋಟ-ಜಮೀನುಗಳಲ್ಲಿ ನೀರು ನಿಂತಿದೆ.

ಸಮೀಪದ ಚಿಕ್ಕ ಎಮ್ಮಿಗನೂರು ಗ್ರಾಮದಿಂದ ಹಿರೇಎಮ್ಮಿಗನೂರು ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಐದಾರು ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳಿದ ಪರಿಣಾಮ ಏಳೆಂಟು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ರಸ್ತೆ ಮೇಲೆ ಮರಗಳು ಉರುಳಿ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿ ವಾಹನ ಸವಾರರು ಪರದಾಡಬೇಕಾಯಿತು. ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಸ್ತೆಯಲ್ಲಿ ಬಿದ್ದಿದ್ದ ಮರದ ಕೊಂಬೆಗಳನ್ನು ತೆರವು ಗೊಳಿಸಿದ್ದರಿಂದ ವಾಹನಗಳ ಸಂಚಾರ ಸುಗಮವಾಯಿತು.

ತುಂಬಿ ಹರಿದ ಹಳ್ಳ ಕೊಳ್ಳಗಳು: ಸಮೀಪದ ಕಡೂರು ಗ್ರಾಮದ ಕರಡಿಹಳ್ಳ, ಉದ್ದೇಶಿಗ ಹಳ್ಳ, ಬಿ. ದುರ್ಗ ಗ್ರಾಮದ ಬೆಳ್ಳಿ ಸರ, ರಂಗವ್ವನಹಳ್ಳಿ ಗ್ರಾಮದ ಹಳ್ಳಗಳು, ವಿಶ್ವನಾಥನಹಳ್ಳಿ ಸಮೀಪದ ಹಳ್ಳಗಳು ಹಾಗೂ ದೇವರಗಂಜಗಟ್ಟೆ ಗ್ರಾಮದ ಬಳಿಯ ಮಿಂಚೇರಿ ಬೆಟ್ಟದಲ್ಲಿ ಬಿದ್ದ ನೀರು ಹಳ್ಳಿಗಳಲ್ಲಿ ಹರಿಯುತ್ತಿದ್ದ ದೃಶ್ಯ ಕಂಡು ಬಂದಿತು. ಸಮೀಪದ ಹನುಮನಕಟ್ಟೆ, ಕೇಶವಾಪುರ, ಗೌರೀಪುರ, ಕೊಂಡಾಪುರ, ಕಾಶೀಪುರ ಮೊದಲಾದ ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಅಲ್ಲಿಯ ಹಳ್ಳಗಳ ನೀರು ಕೇಶವಾಪುರ, ಹನುಮನಕಟ್ಟೆ ಹಾಗೂ ಭೀಮ ಸಮುದ್ರದ ಕೆರೆಗಳಿಗೆ ಹರಿಯಿತು.

ಭಾರಿ ಮಳೆಯಿಂದಾಗಿ ಬಿ. ದುರ್ಗ ಹೋಬಳಿ ಹಾಗೂ ಚಿಕ್ಕಜಾಜೂರು ವ್ಯಾಪ್ತಿಯ ಅಡಿಕೆ, ತೆಂಗಿನ ತೋಟಗಳು, ಮೆಕ್ಕೆಜೋಳ, ಹತ್ತಿ, ತರಕಾರಿ, ಹೂವಿನ ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿತ್ತು.

ಜಲಪಾತ ಸೃಷ್ಟಿಸಿದ ಮಳೆ: ದೇವರ ಗಂಜಿಗಟ್ಟೆ ಗ್ರಾಮದ ಬಳಿ ಇರುವ ಮಿಂಚೇರಿ ಬೆಟ್ಟದಲ್ಲಿ ಸಾಕಷ್ಟು ಮಳೆ ಬಿದ್ದಿದ್ದರಿಂದ ಬೆಟ್ಟದ ಮೇಲಿಂದ ನೀರು ಸುರಿಯುವ ದೃಶ್ಯ ಕಣ್ಮನ ಸೆಳೆಯುವಂತಿತ್ತು. ಸುತ್ತಮುತ್ತಲಿನ ಗ್ರಾಮಗಳ ಜನರು ಜಲಧಾರೆಯ ದೃಶ್ಯವನ್ನು ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.

ಚಿಕ್ಕಜಾಜೂರು ಸಮೀಪದ ಚಿಕ್ಕ ಎಮ್ಮಿನೂರು ಗ್ರಾಮದ ರಸ್ತೆ ಬದಿಯಲ್ಲಿನ ಮರವೊಂದು ವಿದ್ಯುತ್ ಕಂಬದ ತಂತಿ ಮೇಲೆ ಉರುಳಿ ಬಿದ್ದಿರುವುದನ್ನು ಬೆಸ್ಕಾಂ ಸಿಬ್ಬಂದಿ ತೆರವುಗೊಳಿಸಲು ಕಾರ್ಯಾಚರಣೆ ನಡೆಸಿದರು
ಚಿಕ್ಕಜಾಜೂರು ಸಮೀಪದ ಚಿಕ್ಕ ಎಮ್ಮಿನೂರು ಗ್ರಾಮದ ರಸ್ತೆ ಬದಿಯಲ್ಲಿನ ಮರವೊಂದು ವಿದ್ಯುತ್ ಕಂಬದ ತಂತಿ ಮೇಲೆ ಉರುಳಿ ಬಿದ್ದಿರುವುದನ್ನು ಬೆಸ್ಕಾಂ ಸಿಬ್ಬಂದಿ ತೆರವುಗೊಳಿಸಲು ಕಾರ್ಯಾಚರಣೆ ನಡೆಸಿದರು
ಚಿಕ್ಕಜಾಜೂರು ಸಮೀಪದ ಗಂಜಿಗಟ್ಟೆ ಗ್ರಾಮದ ಬಳಿಯ ಮಿಂಚೇರಿ ಬೆಟ್ಟದ ಮೇಲಿನಿಂದ ನೀರು ಜಲಪಾತದಂತೆ ಸುರಿಯುತ್ತಿರುವ ಮನಮೋಹಕ ದೃಶ್ಯ
ಚಿಕ್ಕಜಾಜೂರು ಸಮೀಪದ ಗಂಜಿಗಟ್ಟೆ ಗ್ರಾಮದ ಬಳಿಯ ಮಿಂಚೇರಿ ಬೆಟ್ಟದ ಮೇಲಿನಿಂದ ನೀರು ಜಲಪಾತದಂತೆ ಸುರಿಯುತ್ತಿರುವ ಮನಮೋಹಕ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT