ಭಾನುವಾರ, ನವೆಂಬರ್ 27, 2022
26 °C

ಮಳೆ: ತುಂಬಿ ಹರಿದ ಹಳ್ಳಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಜಾಜೂರು:  ಸೋಮವಾರ ಮುಂಜಾನೆಯಿಂದ ಸುರಿದ ಮಳೆಯಿಂದಾಗಿ ಹೋಬಳಿಯ ಬಹುತೇಕ ಕಡೆಗಳಲ್ಲಿ ಜಮೀನು, ತೋಟಗಳು ಜಲಾವೃತಗೊಂಡಿವೆ.  ಹಳ್ಳಗಳು ತುಂಬಿ ಹರಿದಿವೆ.

ಚಿಕ್ಕಜಾಜೂರಿನಲ್ಲಿ 8.6 ಮಿ.ಮೀ., ಬಿ. ದುರ್ಗದಲ್ಲಿ 46.2 ಮಿ.ಮೀ. ಮಳೆಯಾಗಿದೆ. ತರಳಬಾಳು ನಗರದ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಚೆಕ್‌ಡ್ಯಾಂ ಧುಮ್ಮುಕ್ಕುತ್ತಿದ್ದ ನೀರು ಕಿರು ಜಲಪಾತ ಸೃಷ್ಟಿಸಿತು. ‌

ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಅಧಿಕ ಮಳೆಯಿಂದಾಗಿ ಸಂಪೂರ್ಣವಾಗಿ ನಷ್ಟವಾಗಿದ್ದರಿಂದ ಹೋಬಳಿಯ ಅನೇಕ ರೈತರು ಮೆಕ್ಕೆಜೋಳವನ್ನು ಅಳಿಸಿ, ಮತ್ತೆ ಮೆಕ್ಕೆಜೋಳ, ರಾಗಿ, ಹುರುಳಿ ಮತ್ತಿತರ ಅಲ್ಪ ಕಾಲಾವಧಿಯ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ವಾರದಿಂದ ಮಳೆ ಬಿಡುವು ನೀಡಿದ್ದರಿಂದ, ಹೊಸದಾಗಿ ಬಿತ್ತನೆ ಮಾಡಿದ್ದ ಸಸಿಗಳಿಗೆ ಮಳೆ ಅಗತ್ಯವಿತ್ತು. 

ಆದರೆ ಕೆಲ ರೈತರ ಜಮೀನಿನಲ್ಲಿ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಅಧಿಕ ಮಳೆಯಿಂದಾಗಿ ಹಾಳಾಗಿದ್ದು, ಅಲ್ಪಸ್ವಲ್ಪ ಇದ್ದ ಮೆಕ್ಕೆಜೋಳವನ್ನು ಮೇವಿಗೆ ತೆಗೆದುಕೊಂಡು ಹೋಗುತ್ತಿದ್ದುದು ಕಂಡುಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು