ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ಸಂಭ್ರಮದ ರಂಗನಾಥಸ್ವಾಮಿ ರಥೋತ್ಸವ

Last Updated 1 ನವೆಂಬರ್ 2020, 1:42 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಸಿಂಗೇನಹಳ್ಳಿಯಲ್ಲಿ ಶನಿವಾರ ಜಾನೇ ರಂಗನಾಥ ಸ್ವಾಮಿಯ ರಥೋತ್ಸವ ಸಂಭ್ರಮದಿಂದ ನಡೆಯಿತು.

ಹೂಗಳಿಂದ ಅಲಂಕರಿಸಿ ರಥದ ಮೇಲೆ ದೇವರನ್ನು ಕೂರಿಸಿ ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮಸ್ಥರು, ಭಕ್ತರು ರಾಜಬೀದಿಯಲ್ಲಿ ರಥ ಎಳೆದು ಭಕ್ತಿಭಾವ ಮೆರೆದರು. ದಸರಾ ಮುಗಿದ ನಂತರ ಇಲ್ಲಿ ಅಂಬಿನೋತ್ಸವ ನಡೆಯುತ್ತದೆ. ಕತ್ತಿ, ಬಿಲ್ಲು ಹಾಗೂ ಬಂದೂಕಿನಿಂದ ಬಾಳೆದಿಂಡಿಗೆ ಹೊಡೆಯುವ ಮೂಲಕ ಅಂಬಿನೋತ್ಸವ ಆಚರಿಸಲಾಯಿತು.

ಭಕ್ತರಿಗೆ ಕಾಯಿ, ಬಾಳೆಹಣ್ಣು, ಮಂಡಕ್ಕಿಯ ಪ್ರಸಾದ ವಿತರಿಸಲಾಯಿತು. ಸಂಜೆ ರಂಗನಾಥಸ್ವಾಮಿ, ತಾಳಕಟ್ಟದ ಕರಿಯಮ್ಮ ದೇವಿ ಹಾಗೂ ಬಸವೇಶ್ವರ ಸ್ವಾಮಿಯ ದೊಡ್ಡೆಡೆ ಸೇವೆ ನಡೆಯಿತು. ಜಾತ್ರೆಯಲ್ಲಿ ಹೂವಿನ ಪಲ್ಲಕ್ಕಿ ಉತ್ಸವ, ಕುದುರೆ ಪೂಜೆ, ಕಳಸ ಪೂಜೆ, ಬಿಲ್ಲುಗೂಡು ಹಾಕುವುದು ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT