ಚಿತ್ರದುರ್ಗ: ‘ಗಣರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಾಗುವುದರಲ್ಲಿ ಅರ್ಥವಿಲ್ಲ. ಅದರ ಕಲ್ಪನೆಯನ್ನು ಜೀವನದಲ್ಲಿ ಅನುಸರಿಸುವ ಮನೋಭಾವ ನಮ್ಮದಾಗಬೇಕು’ ಎಂದು ಉಪನ್ಯಾಸಕ ಎಂ.ವೇದಾಂತ ಏಳಂಜಿ ತಿಳಿಸಿದರು.

ತಾಲ್ಲೂಕಿನ ಸೀಬಾರ– ಗುತ್ತಿನಾಡು ಗ್ರಾಮದ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂವಿಧಾನದಲ್ಲಿ ಅಳವಡಿಸಿರುವ ಮೂಲ ಕಲ್ಪನೆಗಳನ್ನು ಭಾರತೀಯರು ಅನುಸರಿಸಿದಾಗ ಮಾತ್ರ ಗಣರಾಜ್ಯಕ್ಕೆ ಸೂಕ್ತ ಅರ್ಥ ಸಿಗುತ್ತದೆ’ ಎಂದರು.

‘ವಿದ್ಯಾರ್ಥಿ ಜೀವನದಿಂದಲೇ ಪ್ರಜಾಪ್ರಭುತ್ವದ ಕಲ್ಪನೆ, ಕರ್ತವ್ಯಗಳನ್ನು ತಿಳಿಯಬೇಕು. ಜತೆಗೆ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಬೇಕು’ ಎಂದು ಸಂಸ್ಥೆ ಅಧ್ಯಕ್ಷ ಟಿ.ಎಚ್.ಬುಡೇನ್ ಸಾಬ್ ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಎಂ.ನೀಲಕಂಠದೇವರು, ರೂವಾರಿ ಎಚ್.ಜಲೀಲ್ ಸಾಬ್, ಸದಸ್ಯ ಮೊಹಮ್ಮದ್ ಮಿರ್ಜಾ, ಪ್ರಾಂಶುಪಾಲೆ ಎಚ್.ಆರ್.ಸುಧಾ, ಮುಖ್ಯ ಶಿಕ್ಷಕರಾದ ಚನ್ನಬಸಪ್ಪ, ಶಿವರುದ್ರಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.