ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರಿಯೂರು: ವೀರಶೈವ ಮಹಾಸಭಾದ ಮಹಾಧಿವೇಶನಕ್ಕೆ ಆಗಮಿಸಲು ಮನವಿ

Published 17 ಡಿಸೆಂಬರ್ 2023, 15:43 IST
Last Updated 17 ಡಿಸೆಂಬರ್ 2023, 15:43 IST
ಅಕ್ಷರ ಗಾತ್ರ

ಹಿರಿಯೂರು: ದಾವಣಗೆರೆಯಲ್ಲಿ ಡಿ.23 ಮತ್ತು 24ರಂದು ಹಮ್ಮಿಕೊಂಡಿರುವ ಅಖಿಲ ಭಾರತ ವೀರಶೈವ ಮಹಾಸಭಾ ಮಹಾಧಿವೇಶನಕ್ಕೆ ಹಿರಿಯೂರು ತಾಲ್ಲೂಕಿನಿಂದ ವೀರಶೈವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಪಿ. ಯಶವಂತರಾಜು ಮನವಿ ಮಾಡಿದರು.

ನಗರದ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಾಸಭಾದ ತಾಲ್ಲೂಕು ಘಟಕದ ಪದಾಧಿಕಾರಿಗಳ ಹಾಗೂ ನಿರ್ದೇಶಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಧಿವೇಶನಕ್ಕೆ ಹೆಚ್ಚೆಚ್ಚು ಜನರನ್ನು ಕರೆತರಲು ಮಹಾಸಭಾದ ಮುಖ್ಯ ಘಟಕ, ಮಹಿಳಾ ಘಟಕ ಹಾಗೂ ಯುವ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಯತ್ನಿಸಬೇಕು. ವೀರಶೈವ ಸಮುದಾಯ ಪ್ರಸ್ತುತ ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಶಾಮನೂರು ಶಿವಶಂಕರಪ್ಪ ಅವರನ್ನು ಪಕ್ಷಾತೀತವಾಗಿ ಬೆಂಬಲಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿ ಇದ್ದೇವೆ. ದಾವಣಗೆರೆಯ ಅಧಿವೇಶನ ಜನಾಂಗದ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಬೇಕು’ ಎಂದು ಅವರು ತಿಳಿಸಿದರು.

ದಾವಣಗೆರೆಗೆ ಹೋಗಿಬರಲು ಡಿ. 23ರಂದು ಬೆಳಿಗ್ಗೆ 8ಕ್ಕೆ ಬಸವಣ್ಣನ ಗುಡಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಡಿ.20ರಂದು ಸಂಜೆಯ ಒಳಗೆ ಯಶವಂತರಾಜು, ಸ್ವಾಮಿ, ಟಿ.ರವಿಶಂಕರ್, ಶಶಿಕಲಾ ರವಿಶಂಕರ್, ಸರ್ವಮಂಗಳಾ ರಮೇಶ್, ಶ್ಯಾಮಲಾ ಸತೀಶ್ ಅಥವಾ ತ್ರಿವೇಣಿ ಶಶಿಧರ್ ಅವರಲ್ಲಿ ಹೆಸರನ್ನು ನೋಂದಾಯಿಸಬೇಕು ಎಂದು ಅವರು ಮನವಿ ಮಾಡಿದರು.

ಸಭೆಯಲ್ಲಿ ಶಶಿಕಲಾ ರವಿಶಂಕರ್, ಟಿ.ರವಿಶಂಕರ್, ಸ್ವಾಮಿ, ಉಮೇಶಯ್ಯ, ಸರ್ವಮಂಗಳಾರಮೇಶ್, ತ್ರಿವೇಣಿ ಶಶಿಧರ್, ಶ್ಯಾಮಲಾ ಸತೀಶ್, ತ್ರಿವೇಣಿ ಸತೀಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT