ಹೊಳಲ್ಕೆರೆ: ತಾಲ್ಲೂಕಿನ ಚನ್ನಪ್ಪನ ಹಟ್ಟಿಯಲ್ಲಿ ಗುರುವಾರ ಶಾಸಕ ಎಂ.ಚಂದ್ರಪ್ಪ ₹30 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.

‘ಚನ್ನಪ್ಪನ ಹಟ್ಟಿ ಚಿಕ್ಕ ಗ್ರಾಮವಾಗಿದ್ದರೂ, ಹೆಚ್ಚು ಅನುದಾನ ನೀಡಿದ್ದೇನೆ. ಗ್ರಾಮದ ಮೂರು ಕಡೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು. ಪಕ್ಕದ ದುಮ್ಮಿ ಕೆರೆಗೆ ಭದ್ರಾ ನೀರು ಬರುವುದರಿಂದ ಈ ಭಾಗದ ತೋಟಗಳಿಗೆ ಅನುಕೂಲ ಆಗಲಿದೆ. ಹಿಂದೆ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಇತ್ತು. ಗ್ರಾಮದ ಸಮೀಪದಲ್ಲಿರುವ ಮಲ್ಲಾಡಿಹಳ್ಳಿಯಲ್ಲಿ ₹22 ಕೋಟಿ ವೆಚ್ಚದಲ್ಲಿ ಪವರ್ ಸ್ಟೇಷನ್ ಮಾಡಿರುವುದರಿಂದ ವಿದ್ಯುತ್ ಸಮಸ್ಯೆ ಬಗೆಹರಿಸಿದೆ. ಈಗ 350ರಿಂದ 400 ವೋಲ್ಟೇಜ್ ಇರುತ್ತದೆ’ ಎಂದರು.

ನಿವೃತ್ತ ಶಿಕ್ಷಕ ಟಿ.ಶಿವು, ಗ್ರಾಮದ ಮುಖಂಡ ಪರಮೇಶ್ವರಪ್ಪ, ನಿವೃತ್ತ ಶಿಕ್ಷಕ ಬಸವಂತಪ್ಪ, ಶಿವಣ್ಣ, ಜಿ.ಬಿ.ಚೇತನ್ ಕೆಆರ್ಐಡಿಎಲ್ ಎಂಜಿನಿಯರ್ ತೇಜಸ್, ಗುತ್ತಿಗೆದಾರ ಬಾಬಣ್ಣ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.