ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಸ್ತುಂ-2 ಡ್ರೋನ್ ಯಶಸ್ವಿ ಹಾರಾಟ

Last Updated 10 ಅಕ್ಟೋಬರ್ 2020, 20:07 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಭಾರತೀಯ ವಾಯುಪಡೆಗೆ ಶಕ್ತಿ ತುಂಬುವ ‘ರುಸ್ತುಂ-2’ ಮಾನವ ರಹಿತ ಡ್ರೋನ್ ಪರೀಕ್ಷಾರ್ಥ ಪ್ರಯೋಗ ಶನಿವಾರ ಕುದಾಪುರದ ಡಿಆರ್‌ಡಿಒ ಏರೋನ್ಯಾಟಿಕಲ್ ಟೆಸ್ಟ್‌ರೇಂಜ್-2 ಕ್ಯಾಂಪಸ್‌ನಲ್ಲಿ ಯಶಸ್ವಿಯಾಗಿದೆ.

ಅಮೆರಿಕದ ಪ್ರಿಡೇಟರ್ ಮಾನವ ರಹಿತ ಯುದ್ಧ ವಿಮಾನ (ಡ್ರೋನ್) ಮಾದರಿಯನ್ನು ಹೋಲುವ ‘ರುಸ್ತುಂ-2’ ಭಾರತೀಯ ವಾಯುಪಡೆಯ ಭರವಸೆಯ ಶಕ್ತಿಯಾಗಿ ಗುರುತಿಸಿಕೊಂಡಿದೆ. ಇಂತಹ ‘ರುಸ್ತುಂ-2’ ಮಾನವ ರಹಿತವಾದ ಡ್ರೋನ್ ಸಾಮಾನ್ಯ ವಾಯುಗುಣ ಸಾಮರ್ಥ್ಯದಲ್ಲಿ ಸುಮಾರು 16 ಸಾವಿರ ಅಡಿ ಎತ್ತರದಲ್ಲಿ ಸತತ 8 ಗಂಟೆಗಳ ಕಾಲ ಯಶಸ್ವಿ ಹಾರಾಟವನ್ನು ದಾಖಲಿಸಿದೆ.

ರುಸ್ತುಂ-2ರಲ್ಲಿ ಸ್ವಯಂಚಾಲಿತ ಬುದ್ಧಿವಂತಿಕೆಯ ಸಾಮರ್ಥ್ಯ ಹೊಂದಿದ್ದು, ಸಿಂಥೆಟಿಕ್ ಅಪಾರ‍್ಚರ್ ರಾಡಾರ್‌ ಸಂಪರ್ಕ, ತಕ್ಷಣಕ್ಕೆ ಒದಗುವ ಅಪಾಯಗಳಿಂದ ಸ್ವಯಂ ರಕ್ಷಣೆ ಹಾಗೂ ಜಾಗೃತಗೊಳ್ಳುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಹಾರಾಟಕ್ಕೆ ತೆರಳಿದಾಗ ವಾಯು ನೆಲೆಯಿಂದ ನಿರಂತರ ಸಂಪರ್ಕ ಹೊಂದಿ ಎಲ್ಲ ರೀತಿಯ ಸಂದೇಶಗಳನ್ನು ನಿರಂತರವಾಗಿ ಕಳುಸುವ ಕಾರ್ಯಕ್ಷಮತೆ ಹೊಂದಿದೆ.

ಶನಿವಾರ ಬೆಳಿಗ್ಗೆ ಒಂದು ಗಂಟೆಯ ಇಂಧನ ಸಾಮರ್ಥ್ಯವನ್ನು ತುಂಬಿಕೊಂಡು ಸುಮಾರು 8 ಗಂಟೆಗಳ ಕಾಲ 16 ಸಾವಿರ ಅಡಿ ಎತ್ತರದ ಆಗಸದಲ್ಲಿ ಹಾರಾಟ ನಡೆಸಿ ನಂತರ ಯಾವುದೇ ಅಡೆತಡೆಗಳಿಲ್ಲದೆ ವಾಯುನಲೆಗೆ ವಾಪಸ್ಸಾಗಿದೆ. ಈ ಬೆಳವಣಿಗೆಯಿಂದ ಇಲ್ಲಿನ ವಾಯು ನೆಲೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು.

‘ರುಸ್ತುಂ-2 ಡ್ರೋನ್ ಎಲ್ಲ ಹಂತದ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಮುಂದಿನ ದಿನಗಳಲ್ಲಿ 26 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುವ ನಮ್ಮ ಗುರಿಯನ್ನು ಮುಟ್ಟಲಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT