ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿರಿಗೆರೆ: ಸೆ. 20 ರಿಂದ ಶಿವಕುಮಾರ ಶ್ರೀ ಶ್ರದ್ಧಾಂಜಲಿ

Published : 8 ಸೆಪ್ಟೆಂಬರ್ 2024, 15:24 IST
Last Updated : 8 ಸೆಪ್ಟೆಂಬರ್ 2024, 15:24 IST
ಫಾಲೋ ಮಾಡಿ
Comments

ಸಿರಿಗೆರೆ: ತರಳಬಾಳು ಮಠದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಶ್ರೀಗಳ 32ನೇ ಶ್ರದ್ಧಾಂಜಲಿ ಸಮಾರಂಭ ಸೆ. 20 ರಿಂದ 24ರವರೆಗೆ ನಡೆಯುತ್ತದೆ.

ಇಲ್ಲಿಯ ಸದ್ಧರ್ಮ ನ್ಯಾಯಪೀಠದ ಸಭಾಂಗಣದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಭಕ್ತರ ಸಭೆಯಲ್ಲಿ ದಿನಾಂಕವನ್ನು ಅಂತಿಮಗೊಳಿಸಲಾಯಿತು.

ಶ್ರದ್ಧಾಂಜಲಿ ಅಂಗವಾಗಿ 5 ದಿನಗಳ ಹಲವು ಸಾಂಸ್ಕೃತಿಕ, ಸಾಹಿತ್ಯಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಕಾರ್ಯಕ್ರಮಕ್ಕೆ ಬರುವ ಭಕ್ತಾದಿಗಳಿಗೆ ದಾಸೋಹ ಏರ್ಪಡಿಸಲು ಅಗತ್ಯವಾದ ಕಮಿಟಿಗಳನ್ನು ಸಭೆಯಲ್ಲಿ ರಚಿಸಲಾಯಿತು.

ಶ್ರದ್ಧಾಂಜಲಿ ನಿಧಿ: ಶ್ರದ್ಧಾಂಜಲಿ ನಿಧಿಗೆ ಭಕ್ತರ ಕಾಣಿಕೆ ಸಂಗ್ರಹಿಸಲು ಸಮಿತಿಗಳನ್ನು ನೇಮಿಸಲಾಯಿತು. ಅಲ್ಲದೆ ಭಕ್ತಾದಿಗಳು ದಾಸೋಹಕ್ಕೆ ಅಗತ್ಯವಾದ ತರಕಾರಿ, ದಿನಸಿ ಸಾಮಗ್ರಿಗಳನ್ನು ನೀಡಬೇಕೆಂದು ಕೋರಲಾಯಿತು.

ತುಮ್ಕೋಸ್‌ನಿಂದ 1 ಲಕ್ಷ ಲಾಡು: ಈ ಬಾರಿಯೂ ಸಹ ಚನ್ನಗಿರಿಯ ತುಮ್ಕೋಸ್‌ ಸಂಸ್ಥೆಯು ಶ್ರದ್ಧಾಂಜಲಿ ದಾಸೋಹಕ್ಕೆ 1 ಲಕ್ಷ ಲಾಡು ಉಂಡೆಗಳನ್ನು ನೀಡಲಿದೆ ಎಂದು ಸ್ವಾಮೀಜಿ  ಪ್ರಕಟಿಸಿದರು.

ಆಡಳಿತಾಧಿಕಾರಿ ಎಚ್.‌ ವಿ. ವಾಮದೇವಪ್ಪ, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.‌ ಮರುಳಸಿದ್ದಯ್ಯ, ಕಾರ್ಯದರ್ಶಿ ವಿಜಯಾಚಾರ್‌, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ. ಮಂಜುನಾಥ್‌, ಕೃಷಿ ಸಮಿತಿಯ ಎಂ. ಬಸವರಾಜಯ್ಯ, ಸಿ.ಆರ್.‌ ನಾಗರಾಜ್‌, ವಿಶ್ವಬಂಧು ಬ್ಯಾಂಕಿನ ಅಧ್ಯಕ್ಷ ಜಿ.ಬಿ. ತೀರ್ಥಪ್ಪ, ಇಫ್ಕೋ ನಿರ್ದೇಶಕ ಕೋಗುಂಡೆ ಮಂಜುನಾಥ್‌, ಎಚ್. ಎಂ. ದ್ಯಾಮಪ್ಪ, ಸಿ. ಬಸವಕುಮಾರ್‌ ಮುಂತಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT