ಭಾನುವಾರ, ಮೇ 16, 2021
29 °C

10ನೇ ತರಗತಿ ವಿದ್ಯಾರ್ಥಿಗಳ ಕಲಿಕೆಗೆ ಕ್ರಮ: ಬಿಇಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: 10ನೇ ತರಗತಿ ಪರೀಕ್ಷೆಗೆ ಮಕ್ಕಳನ್ನು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಸುವುದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಗೂಗಲ್ ಮೀಟ್ ಮೂಲಕ ಶನಿವಾರ ಸಭೆ ನಡೆಸಿ ಮುಖ್ಯಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.

ಲಾಕ್‌ಡೌನ್‌ನಿಂದ ಶಾಲೆಗಳು ಬಂದ್ ಆಗಿವೆ. ಇದರಿಂದ ವಿದ್ಯಾರ್ಥಿಗಳ ಕಲಿಕೆ ಸ್ಥಗಿತವಾಗಬಾರದು. ಹಾಗಾಗಿ ಪ್ರತಿದಿನ 2 ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆ ತಯಾರಿಸಿ ವಿದ್ಯಾರ್ಥಿಗಳಿಗೆ ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಬೇಕು. ಸಮಯ ನಿಗದಿ ಮಾಡಿ ಉತ್ತರ ಬರೆದು ಕಳುಹಿಸುವಂತೆ ಸೂಚಿಸಬೇಕು. ವಿದ್ಯಾರ್ಥಿಗಳ ತಪ್ಪು ಪತ್ತೆಹಚ್ಚಿ ಸುಧಾರಣೆಗೆ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಬೇಕು ಎಂದರು.

ಕಠಿಣವಾದ ವಿಷಯಗಳ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು. ಮಕ್ಕಳ ಸಾಧನೆಗೆ ಶ್ರಮಿಸಬೇಕು. ದೋಷ ಪರಿಹರಿಸಿ ಉತ್ತಮ ಸಾಧನೆಗೆ ಆತ್ಮಸ್ಥೈರ್ಯ ತುಂಬಬೇಕು. ಪರೀಕ್ಷಾ ಮಂಡಳಿಯಿಂದ ಬಿಟ್ಟಿರುವ ಅಭ್ಯಾಸ ಪ್ರಶ್ನೆ ಪತ್ರಿಕೆಗಳನ್ನು ನೀಡಬೇಕು. ಅದನ್ನು ತೆರೆದ ಪುಸ್ತಕದ ರೀತಿಯಲ್ಲಿ ಅಭ್ಯಾಸ ಮಾಡಿಸಬೇಕು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕಾ ಜ್ಞಾನ ಹೆಚ್ಚಿಸಬೇಕು ಎಂದು ನಿರ್ದೇಶನ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು