ಬೀದಿನಾಯಿಗಳಿಗೆ ಕಡಿವಾಣಕ್ಕೆ ಆಗ್ರಹ: ಬೀದಿನಾಯಿಗಳ ಹಾವಳಿಯಿಂದ ಗ್ರಾಮದ ಕುರಿ, ಮೇಕೆ ಹಾಗೂ ಎಮ್ಮೆಗಳು ಆಗಿಂದಾಗ್ಗೆ ಸಾವನ್ನಪ್ಪುತ್ತಿವೆ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಗುಂಪು ಗುಂಪಾಗಾಗಿ ತಿರುಗಾಡುತ್ತಿರುವ ಬೀದಿನಾಯಿಗಳನ್ನು ಹಿಡಿದು ಬೇರೆಡೆಗೆ ಬಿಟ್ಟು ಬರಲು ಕ್ರಮ ಕೈಗೊಳ್ಳಬೇಕು ಎಂದು ಕುರಿಗಾಹಿ ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ.