ಧರ್ಮಪುರ: ಹೋಬಳಿ ಯಾವಾಗಲೂ ಬರಪೀಡಿತ ಪ್ರದೇಶ. ಮಳೆಯ ಪ್ರಮಾಣ ವಾಡಿಕೆಗಿಂತ ಕಡಿಮೆ. ಇಲ್ಲಿ ಯಾವುದೇ ನೀರಾವರಿ ಮೂಲಗಳಿಲ್ಲ. ಇನ್ನು ವಾಣಿ ವಿಲಾಸ ಜಲಾಶಯ ಇದ್ದರೂ ಸಮುದ್ರದ ನೆಂಟಸ್ಥನ, ಕುಡಿಯುವ ನೀರಿಗೆ ಬಡತನ ಎಂಬಂತಾಗಿದೆ.

1,000 ಅಡಿಯವರೆಗೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದೇ ಇರುವ ಸಂದರ್ಭದಲ್ಲಿ 10 ಎಕರೆಯಲ್ಲಿ ಟೊಮೆಟೊ ಬೆಳೆದು ಇನ್ನೇನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಕೊರೊನಾ ಕರಿ ನೆರಳು ಟೊಮೆಟೊ ಬೆಳೆಗಾರನ ಆಶಾಭಾವನೆಯನ್ನೇ ಕಿತ್ತುಕೊಂಡಿದೆ.

ಹೋಬಳಿಯ ಮುಂಗುಸುವಳ್ಳಿಯ ರೈತ ತಿಮ್ಮಣ್ಣ ಜಿ. ಬಂಗಾರಪ್ಪ ಅಚರು ಹತ್ತು ಎಕರೆಯಲ್ಲಿ 75 ಸಾವಿರ ಟೊಮೆಟೊ ಗಿಡಗಳನ್ನು ಬೆಳೆಸಿದ್ದಾರೆ. ಗಿಡಗಳೆಲ್ಲ ಹುಲುಸಾಗಿ ಹಣ್ಣು ಬಿಟ್ಟಿವೆ.

‘ಸುಮಾರು ₹ 6 ಲಕ್ಷ ಖರ್ಚು ಮಾಡಿ ಗಿಡಕ್ಕೆ ಆಸರೆಯಾಗಿ ಗೂಟ ಹಾಕಲಾಗಿದೆ. ನೀರಿಗಾಗಿ ₹ 9 ಲಕ್ಷ ಖರ್ಚು ಮಾಡ
ಲಾಗಿದೆ. ಕೊನೆಗೂ ಸಿಕ್ಕ ಸ್ವಲ್ಪಪ್ರಮಾಣದ ನೀರನ್ನು ಹನಿ ನೀರಾವರಿಯನ್ನಾಗಿ ಮಾಡಿಕೊಂಡು ಉತ್ಕೃಷ್ಟವಾಗಿ ಹಣ್ಣು ಬೆಳೆಯ
ಲಾಗಿದೆ. ಆದರೆ, ರಾಕ್ಷಸನಂತೆ ಅಪ್ಪಳಿಸಿರುವ ಕೊರೊನಾದಿಂದ ಮಾರುಕಟ್ಟೆ ಬಂದ್ ಆಗಿವೆ. ವ್ಯಾಪಾರಸ್ಥರು ಬರುತ್ತಿಲ್ಲ. ಮಧ್ಯವರ್ತಿಗಳು ಕೆ.ಜಿಗೆ ₹ 1 ಕೇಳುತ್ತಾರೆ ಎಂಬ ಅಸಮಾಧಾನ. ಕಳೆದ ಒಂದು ವಾರದಿಂದ ಕಿತ್ತಿರುವ ಹಣ್ಣು ರಾಶಿಯಲ್ಲಿಯೇ ಕೊಳೆ ಯುತ್ತಿದೆ.ಇದರ ಮಧ್ಯೆ ಮಾರುಕಟ್ಟೆಗೆ ಹಣ್ಣು ತೆಗೆದುಕೊಂಡು ಹೋಗಲು ಪೊಲೀಸರು ವಾಹನಗಳನ್ನು ಬಿಡುತ್ತಿಲ್ಲ’ ಎಂಬ ಅಳಲು ಅವರದ್ದು.

ಲಾಕ್ಡೌನ್ನಿಂದಾಗಿ ಕೂಲಿ ಕಾರ್ಮಿಕರು ಹಣ್ಣು ಕೀಳಲು ಜಮೀನಿಗೆ ಬರುತ್ತಿಲ್ಲ. ಇದರಿಂದ ಬೇಸತ್ತಿರುವ ರೈತ ಹಣ್ಣನ್ನು ಕೀಳದೆ ಗಿಡದಲ್ಲೇ ಬಿಟ್ಟಿದ್ದಾರೆ. ಸುಮಾರು ₹ 30 ಲಕ್ಷ ಖರ್ಚು ಮಾಡಿ, ₹ 1 ಕೋಟಿ ಆದಾಯದ ನಿರೀಕ್ಷೆಯಲ್ಲಿದ್ದ ರೈತ ಇದೀಗ ದಾರಿ ಕಾಣದೆ ಕಂಗಾಲಾಗಿದ್ದಾರೆ.

‘ಸರ್ಕಾರ ಪರಿಹಾರ ನೀಡಲಿ’

‘ಧರ್ಮಪುರ ಹೋಬಳಿಯಲ್ಲಿ 300 ಹೆಕ್ಟೇರ್ನಲ್ಲಿ ಟೊಮೆಟೊ ಬೆಳೆಯಲಾಗಿದೆ. ಪ್ರತಿ ರೈತರ ಪರಿಸ್ಥಿತಿಯೂ ಇದೇ ಆಗಿದೆ. ಈಗ ರಸ್ತೆ ಮೇಲೆ ಸುರಿಯುವ ಪರಿಸ್ಥಿತಿ ಎದುರಾಗಿದೆ. ಪ್ರಧಾನಿ ಮೋದಿಯವರು ದೇಶದಲ್ಲಿ ಲಾಕ್ಡೌನ್ ಹೇರಿರುವುದು ಸ್ವಾಗತಾರ್ಹ. ಆದರೆ, ಸರ್ಕಾರವೇ ಇಂತಹ ಸಂದರ್ಭದಲ್ಲಿ ರೈತರಿಗೆ ನೆರವಾಗಬೇಕು. ಬೆಂಬಲ ಬೆಲೆ ನಿಗದಿ ಮಾಡಬೇಕು. ಸೂಕ್ತ ಮಾರುಕಟ್ಟೆ ಒದಗಿಸಬೇಕು. ಉತ್ಪನ್ನಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಪೊಲೀಸರು ಅವಕಾಶ ನೀಡಬೇಕು. ಇಲ್ಲವೇ ಸರ್ಕಾರ ಪರಿಹಾರ ನೀಡಬೇಕು’ ಎಂದು ರೈತ ತಿಮ್ಮಣ್ಣ.ಜಿ ಬಂಗಾರಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.