ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರಮಸಾಗರ | ಯುಗಾದಿ ಹಬ್ಬ: ಸಂತೆಯಲ್ಲಿ ವ್ಯಾಪಾರ ಜೋರು

Published 7 ಏಪ್ರಿಲ್ 2024, 16:15 IST
Last Updated 7 ಏಪ್ರಿಲ್ 2024, 16:15 IST
ಅಕ್ಷರ ಗಾತ್ರ

ಭರಮಸಾಗರ: ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಭಾನುವಾರ ವಿಶೇಷ ಸಂತೆ ನಡೆಯಿತು. ಪ್ರತಿ ಮಂಗಳವಾರ ನಡೆಯುತ್ತಿದ್ದ ವಾರದ ಸಂತೆಹಬ್ಬದ ಅಂಗವಾಗಿ ಭಾನುವಾರ ನಡೆಯಿತು.

ಹೋಬಳಿ ವ್ಯಾಪ್ತಿಯ ಹಳ್ಳಿಗಳು ಸೇರಿ ಬಿಳಿಚೋಡು, ಬಿದರಿಕೆರೆಯಿಂದ ವಾರದ ಸಂತೆಗೆ ಜನರು ಬಂದರು. 

ಬರದ ನಡುವೆಯೂ ಗ್ರಾಮೀಣ ಜನರು ಉತ್ಸಾಹದಿಂದ ಹಬ್ಬಕ್ಕೆ ಅಗತ್ಯವಾದ ವಸ್ತುಗಳನ್ನು, ಆಹಾರ ಪದಾರ್ಥ ಖರೀದಿಸಿದರು. ಕಿರಾಣಿ, ಬಟ್ಟೆ ಅಂಗಡಿಗಳು ಜನದಟ್ಟಣೆಯಿಂದ ಕೂಡಿದ್ದವು. ಕಷ್ಟ, ಸುಖ ಎನ್ನುವುದು ಬೇವು–ಬೆಲ್ಲ ಇದ್ದಂತೆ.

‘ಬರಗಾಲ ಇದೆ. ಕಷ್ಟ ಎಂದು ಹಬ್ಬ ಮಾಡುವುದು ಬಿಡಲಾಗುತ್ತದೆಯೇ. ಅದ್ದೂರಿಯಾಗಿ ಅಲ್ಲದಿದ್ದರೂ ಸಂಪ್ರದಾಯಕ್ಕೆ ಅಗತ್ಯವಾದದ್ದನ್ನು ಖರೀದಿಸಬೇಕು. ಹೊಸ ವರ್ಷದಲ್ಲಿ ಒಳ್ಳೆಯದಾಗುತ್ತದೆ ಎನ್ನುವ ಭಾವನೆಯೊಂದಿಗೆ ಹಬ್ಬ ಆಚರಿಸಬೇಕು’ ಎಂದು ಗ್ರಾಮದ ಚನ್ನಪ್ಪ ಹೇಳಿದರು.

ಭರಮಸಾಗರದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಭಾನುವಾರ ವಿಶೇಷ ಸಂತೆ ನಡೆಯಿತು.
ಭರಮಸಾಗರದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಭಾನುವಾರ ವಿಶೇಷ ಸಂತೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT