ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಾಡಿಗರಹಟ್ಟಿಯ ಕಲುಷಿತ ನೀರು ಪ್ರಕರಣ | ಪತ್ತೆಯಾಗದ ವಿಷಕಾರಿ ಅಂಶ; FSL ವರದಿ

Published 3 ಆಗಸ್ಟ್ 2023, 16:27 IST
Last Updated 3 ಆಗಸ್ಟ್ 2023, 16:27 IST
ಅಕ್ಷರ ಗಾತ್ರ

ಚಿತ್ರದುರ್ಗ: ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟವರ ದೇಹ ಹಾಗೂ ನೀರಿನಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ ಎಂದು ವಿಧಿವಿಜ್ಞಾನ ಪ್ರಯೋಗಾಲಯ ಗುರುವಾರ ವರದಿ ನೀಡಿದೆ.

ನಗರಸಭೆ ವತಿಯಿಂದ ಪೂರೈಕೆ ಮಾಡಿದ ನೀರಿನಲ್ಲಿ ವಿಷ ಬೆರೆಸಿದ ಆರೋಪ ಬಲವಾಗಿ ಕೇಳಿಬಂದಿದ್ದರಿಂದ ಪೊಲೀಸರು ತನಿಖೆ ಆರಂಭಿಸಿದ್ದರು. ಮಹಿಳೆಯ ಮೃತದೇಹ ಹಾಗೂ ನೀರಿನ ಮಾದರಿಗಳನ್ನು ದಾವಣಗೆರೆಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದರು.

‘ವಿಷ ಬೆರೆಸಿದ ಶಂಕೆ ವ್ಯಕ್ತವಾಗಿದ್ದರಿಂದ ನೀರುಗಂಟಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯ ಆಧಾರದ ಮೇರೆಗೆ ತನಿಖೆ ಮುಂದುವರಿಸಲು ನಿರ್ಧರಿಸಲಾಗಿತ್ತು. ಓವರ್‌ ಹೆಡ್‌ ಟ್ಯಾಂಕ್‌, ಮೃತ ಮಹಿಳೆಯ ಮನೆಯ ನೀರು ಹಾಗೂ ಅವರ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿಲ್ಲ ಎಂಬುದು ಖಚಿತವಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ ತಿಳಿಸಿದ್ದಾರೆ.

ಇದನ್ನೂ ಓದಿ: ಕವಾಡಿಗರಹಟ್ಟಿಯ ಕಲುಷಿತ ನೀರು ಪ್ರಕರಣ: ಎಂಜಿನಿಯರ್‌ ಅಮಾನತಿಗೆ ಶಿಫಾರಸು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT