ಮಂಗಳವಾರ, ನವೆಂಬರ್ 19, 2019
27 °C

ಚಿಕಿತ್ಸೆ ಸಿಗದೆ ಗರ್ಭಿಣಿ ಸಾವು | ಸಚಿವರ ಕ್ಷೇತ್ರದಲ್ಲೇ ಅರಿವಳಿಕೆ ತಜ್ಞರಿಲ್ಲ

Published:
Updated:
Prajavani

ಮೊಳಕಾಲ್ಮುರು: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಲಭ್ಯವಾಗದೇ ನೇರ್ಲಹಳ್ಳಿ ಗ್ರಾಮದ ಗರ್ಭಿಣಿ ಕವಿತಾ (30) ಎಂಬುವವರು ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.

ಕವಿತಾ ಅವರನ್ನು ಚಳ್ಳಕೆರೆ ತಾಲ್ಲೂಕಿನ ಮುಷ್ಠಲಗುಮ್ಮಿಗೆ ಮದುವೆ ಮಾಡಿಕೊಡಲಾಗಿತ್ತು. ‘ಶುಕ್ರವಾರ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊಳಕಾಲ್ಮುರಿನ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕಳುಹಿಸಿದರು. ಆಂಬುಲೆನ್ಸ್‌ನಲ್ಲಿ ಬಳ್ಳಾರಿಗೆ ಹೋಗುವಾಗ ಮಾರ್ಗ ಮಧ್ಯೆ ಕವಿತಾ ಮೃತಪಟ್ಟರು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ತುಳಸಿ ರಂಗನಾಥ್ ಮಾಹಿತಿ ನೀಡಿದರು.

* ‘ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರು ಇಲ್ಲದಿರುವುದೇ ಘಟನೆಗೆ ಕಾರಣ. ವೈದ್ಯರು ನಿರ್ಲಕ್ಷ್ಯ ತೋರಿಲ್ಲ’ ಎಂದು ಸ್ಥಳಕ್ಕೆ ಭೇಟಿ ನೀಡಿದ ಸಚಿವ ಶ್ರೀರಾಮುಲು ಹೇಳಿದರು.

 

ಪ್ರತಿಕ್ರಿಯಿಸಿ (+)