ಹಿರಿಯೂರು: ಸ್ವಾತಂತ್ರ್ಯೋತ್ಸವ ಆಚರಣೆಯ ಪೂರ್ವ ತಯಾರಿಯಲ್ಲಿ ಮಂಗಳವಾರ ಪುರಸಭೆ ಆವರಣದಲ್ಲಿ ಕಂಬಕ್ಕೆ ದಾರ ಕಟ್ಟುವಾಗ ಮೇಲಿಂದ ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಿನಗೂಲಿ ನೌಕರ ರಂಗಸ್ವಾಮಿಗೆ ಆಸ್ಪತ್ರೆ ಖರ್ಚು ಮತ್ತು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ಪೌರನೌಕರರ ಸಂಘದ ನೇತೃತ್ವದಲ್ಲಿ ಗುರುವಾರ ಪುರಸಭೆ ಮುಂದೆ ಪ್ರತಿಭಟನೆ ನಡೆಸಲಾಯಿತು.

25 ಅಡಿ ಎತ್ತರದ ಕಂಬ ಹತ್ತಿ ದಾರ ಕಟ್ಟುತ್ತಿದ್ದಾಗ ಕಂಬ ಮುರಿದು ಸಿಮೆಂಟ್ ರಸ್ತೆ ಮೇಲೆ ಬಿದ್ದಿದ್ದರಿಂದ ರಂಗಸ್ವಾಮಿ ಎರಡೂ ಕೈ-ಕಾಲುಗಳು ಮತ್ತು ಸೊಂಟದ ಮೂಳೆ ಮುರಿದಿದ್ದು, ಆತ ಎಂದಿನಂತಾಗಲು ಉನ್ನತ ಸೌಲಭ್ಯಗಳಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಿದೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ದಿನಗೂಲಿಯಿಂದ ಬರುವ ಹಣದಲ್ಲಿ ಬದುಕು ನಡೆಸುತ್ತಿರುವ ರಂಗಸ್ವಾಮಿ ಕುಟುಂಬಕ್ಕೆ ಅಷ್ಟು ಹಣ ಭರಿಸುವ ಶಕ್ತಿಯಿಲ್ಲ. ಸುಮಾರು 15 ವರ್ಷಗಳಿಂದ ದಿನಗೂಲಿಯಾಗಿರುವ ಅವನಿಗೆ ಸೇವಾ ಭದ್ರತೆ, ವೈದ್ಯಕೀಯ ಸೌಲಭ್ಯವಿಲ್ಲದೆ ಜೀತದಾಳಿನಂತೆ ದುಡಿಯುತ್ತಿದ್ದ. ಈಗ ಅವನನ್ನು ಉಳಿಸಿಕೊಳ್ಳಲು ಕುಟುಂಬ ವರ್ಗದವರು ದೊಡ್ಡ ಹೋರಾಟ ನಡೆಸಬೇಕಾಗಿದೆ ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಕೆ. ರಮೇಶ್ ಹೇಳಿದರು.

ಪುರಸಭೆಯ ಕೆಲಸ ಮಾಡುವಾಗ ರಂಗಸ್ವಾಮಿ ಬಿದ್ದಿರುವ ಕಾರಣ ಆತನ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಬೇಕು. ಸದರಿ ನೌಕರ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿರುವ ಕಾರಣ ್ಙ 5 ಲಕ್ಷ ಪರಿಹಾರ ನೀಡಬೇಕು. ಈ ಪ್ರಕರಣ ಮಾನವೀಯತೆಯ ಹಿನ್ನೆಲೆಯಲ್ಲಿ ಪರಿಗಣಿಸಿ ರಂಗಸ್ವಾಮಿಯ ಪತ್ನಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಕೊಡಬೇಕು. 15-20 ವರ್ಷಗಳಿಂದ ದಿನಗೂಲಿಗಳಾಗಿ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಸಿ. ಗೋವಿಂದಪ್ಪ, ಕಾರ್ಯದರ್ಶಿ ಟಿ. ಕೆಂಚರಾಯಪ್ಪ, ಕೆ. ಕದುರಪ್ಪ, ಎಸ್. ರಮೇಶ್, ಬಿ. ನಾಗಪ್ಪ, ಶಿವಣ್ಣ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.