ಚಳ್ಳಕೆರೆ: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹೋರಾಟ ನಡೆಸಿದ ಮಹನೀಯರನ್ನು ಇಂದಿನ ಯುವ ಪೀಳಿಗೆ ಸದಾ ಸ್ಮರಿಸುವಂತಹ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದು ಚಿತ್ರದುರ್ಗ ಉಪ ವಿಭಾಗಾಧಿಕಾರಿ ಎನ್.ಎಂ. ನಾಗರಾಜ ಹೇಳಿದರು.

ಪಟ್ಟಣದ ಬಿ.ಎಂ. ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗುರುವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ 63ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರೆವೇರಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಮೇಲೆ ಆಡಳಿತಕ್ಕೆ ಸಂವಿಧಾನವನ್ನು ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಡಾ.ರಾಜೇಂದ್ರ ಪ್ರಸಾದ್ ಅಂತಹ ಮಹಾತ್ಮರ ಆಶಯಗಳನ್ನು ಭಾರತೀಯರಾದ ನಾವೆಲ್ಲರೂ ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ತಿಪ್ಪೇಸ್ವಾಮಿ ಮಾತನಾಡಿ, ಸಂವಿಧಾನದ ಆಶಯಗಳಿಗೆ ಮನ್ನಣೆ ನೀಡಿ ಗೌರವದಿಂದ ಜೀವನ ಸಾಗಿಸಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಜೆ.ಪಿ. ಜಯಪಾಲಯ್ಯ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಬೋರಮ್ಮ, ಇಒ ಡಾ.ತಿಪ್ಪೇಸ್ವಾಮಿ, ಮುಖಂಡ ಸೋಮಶೇಖರ ಮಂಡೀಮಠ್, ಎಪಿಎಂಸಿ ಅಧ್ಯಕ್ಷ ಎಸ್. ಜಯಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎ. ತಿಮ್ಮಣ್ಣ, ಪಶು ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ, ಪುರಸಭೆ ಅಧ್ಯಕ್ಷೆ ಪಿ. ಶಂಷಾದ್, ಉಪಾಧ್ಯಕ್ಷೆ ಶೋಭಾ, ಮುಖ್ಯಾಧಿಕಾರಿ ಬಿ. ರಾಮಪ್ಪ, ಸದಸ್ಯರಾದ ಪಾರ್ವತಮ್ಮ ಮಂಡೀಮಠ್, ಆರ್. ಪ್ರಸನ್ನ ಕುಮಾರ್, ರಮೇಶಾಚಾರ್, ಡಿವೈಎಸ್‌ಪಿ ಹನುಮಂತರಾಯ, ಸಿಪಿಐ ಮಂಜುನಾಥ ತಳವಾರ, ಆರೋಗ್ಯಾಧಿಕಾರಿ ಡಾ.ಸಿ.ಎಲ್. ಪಾಲಾಕ್ಷ, ಕಂದಾಯ ನಿರೀಕ್ಷಕ ಅಶೋಕ್, ರಾಜಾನಾಯಕ, ಜಲಾನಯನ ಅಧಿಕಾರಿ ವೀರಭದ್ರರೆಡ್ಡಿ, ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ಈಶ್ವರಯ್ಯ ಸೇರಿದಂತೆ ತಾಲ್ಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿರಿಯೂರು ವರದಿ
ಗಿರೀಶ ವಿದ್ಯಾಸಂಸ್ಥೆ: ಇಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಎನ್. ತಿಪ್ಪೇಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಉಪಾಧ್ಯಕ್ಷೆ ಸೌಭಾಗ್ಯವತಿ ದೇವರು, ಕಾರ್ಯದರ್ಶಿ ತ್ರಿಯಂಭಕಮೂರ್ತಿ ಮಾತನಾಡಿದರು. ಎಂ.ಎ. ಸುಧಾ ಉಪಸ್ಥಿತರಿದ್ದರು. ಎಂ.ಆರ್. ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ವಿ.ಟಿ. ಮಂಜುನಾಥ್ ವಂದಿಸಿದರು.

ರಂಗನಾಥ ಡಿಇಡಿ ಸಂಸ್ಥೆ: ಇಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಮಹಾಂತೇಶ್ ಧ್ವಜಾರೋಹಣ ನೆರವೇರಿಸಿದರು. ಪ್ರಾಂಶುಪಾಲ ಎನ್. ಧನಂಜಯ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಟಿ. ವೀರಕರಿಯಪ್ಪ ಅಧ್ಯಕ್ಷತೆ ವಹಿಸಿದ್ದರು.
ಮಲ್ಲಿಕಾರ್ಜುನ್, ಯೋಗೇಶ್, ವಾಣಿ, ಗುರುಪ್ರಕಾಶ್, ಶಾಂತಮೂರ್ತಿ, ಸೌಮ್ಯ, ಸುಧಾ, ಕೆಂಚಪ್ಪ ಮತ್ತಿತರರು ಉಪಸ್ಥಿತರಿದ್ದರು.

ಅರ್ಬನ್ ಬ್ಯಾಂಕ್: ಇಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷ ಆರ್. ಮೊಹಮದ್‌ರಫಿ ಧ್ವಜಾರೋಹಣ ನೆರವೇರಿಸಿದರು. ಸಿ. ಸಿದ್ದರಾಮಣ್ಣ, ಬಿ. ಸುಧಾಕರ್, ವಿ.ಎಂ. ಗೌರಿಶಂಕರ್, ಶ್ರೀನಿವಾಸ್, ಬಿ. ಮಹಾಲಿಂಗಪ್ಪ, ಎಚ್.ಆರ್. ವೀರೇಶ್ ಮತ್ತಿತರರು ಹಾಜರಿದ್ದರು.
ಸ್ಪೂರ್ತಿ ಸ್ವಯಂ ಸೇವಾ ಸಂಸ್ಥೆ: ಇಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ಧ್ವಜಾರೋಹಣ ನೆರವೇರಿಸಿದರು. ಕೆ. ನಾಗರಾಜ್, ಎಸ್.ಟಿ. ರಂಗಸ್ವಾಮಿ, ಸಕ್ಕರ ರಂಗಸ್ವಾಮಿ, ಎಸ್.ಬಿ. ರಂಗಸ್ವಾಮಿ, ಕೆ. ರಾಜಪ್ಪ, ಶಾರದಮ್ಮ, ಪ್ರಹ್ಲಾದ್ ಮತ್ತಿತರರು ಉಪಸ್ಥಿತರಿದ್ದರು.

ಜವನಗೊಂಡನಹಳ್ಳಿ: ಇಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪ್ರಾಂಶುಪಾಲ ಚಂದ್ರಶೇಖರಪ್ಪ ಧ್ವಜಾರೋಹಣ ನೆರವೇರಿಸಿದರು. ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ.ಸಿ. ಸಣ್ಣಚಿಕ್ಕಯ್ಯ, ಬಿ. ಬಸವರಾಜಪ್ಪ ಉಪಸ್ಥಿತರಿದ್ದರು. ಹನುಮಂತಪ್ಪ ಸ್ವಾಗತಿಸಿದರು. ಎಚ್. ರೇವಣಸಿದ್ದಪ್ಪ ವಂದಿಸಿದರು.

ನೆಹರೂ ಮೈದಾನ ಸ.ಹಿ.ಪ್ರಾ.ಶಾಲೆ: ಇಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕೇಶವಮೂರ್ತಿ ಧ್ವಜಾರೋಹಣ ನೆರವೇರಿಸಿದರು. ಶಿಕ್ಷಕರಾದ ದೇವರಾಜ್, ರತನ್‌ಸಿಂಗ್, ಶಿವಕುಮಾರ್, ಪರಮೇಶ್ವರನಾಯ್ಕ, ಸಣ್ಣಕಣುಮಕ್ಕ, ಫಾತೀಮುನ್ನೀಸಾ, ಸವಿತಾ, ಶಂಕರಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

ಎಂಇಎಸ್ ಕಾನ್ವೆಂಟ್: ಇಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಿ. ತಿಮ್ಮಯ್ಯ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಕಾರ್ಯದರ್ಶಿ ಸಿ. ಮಂಜುನಾಥ್, ಎಂ.ಎಸ್. ವಿಶ್ವನಾಥಯ್ಯ, ಬಿ.ಇ. ಹರ್ಷ, ಎಂ.ವಿ. ದೀಪಕ್, ಎಚ್.ಕೆ. ರಘು, ಅನುಸೂಯಮ್ಮ, ಟಿ. ಲೇಪನಾ, ಎಂ. ಈಶ್ವರಪ್ಪ, ಜಿ.ಎಂ. ಅನಿತಾಕುಮಾರಿ ಉಪಸ್ಥಿತರಿದ್ದರು.

ಪ್ರಥಮದರ್ಜೆ ಕಾಲೇಜು
ಸಮಾಜವಾದಿ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಹೊಂದಿರುವ ನಾವು ಪರಸ್ಪರ ಸ್ನೇಹ ಭ್ರಾತೃತ್ವ ಮನೊಭಾವದಿಂದ ಅಖಂಡ ಭಾರತೀಯರಾಗಿ ಬದುಕುವ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕು ಎಂದರು.
ಇಲ್ಲಿನ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಪ್ರೊ.ಸಣ್ಣರಾಮರೆಡ್ಡಿ ಮಾತನಾಡಿ, ತ್ಯಾಗ ಬಲಿದಾನದ ಮೂಲಕ ಪಡೆದ ಸ್ವಾತಂತ್ರ್ಯಕ್ಕೆ ತಮ್ಮದೇ ಆದ ಸಂವಿಧಾನವನ್ನು ರಚಿಸಿ ನಮ್ಮೆಲ್ಲರಿಗೆ ನಿಡಿದ ರಾಷ್ಟ್ರೀಯ ನಾಯಕರ ಗುಣಗಳನ್ನು ಬೆಳೆಸಿಕೊಂಡು, ರಾಷ್ಟ್ರಿಯತೆಗೆ ಗೌರವ ತರುವಂತೆ ಯುವಕರು ನಡೆದುಕೊಳ್ಳಬೇಕು ಎಂದರು.

ಪ್ರೊ.ಶ್ರೀರಾಮರೆಡ್ಡಿ, ಎನ್‌ಎಸ್‌ಎಸ್ ಘಟಕಾಧಿಕಾರಿ ಪ್ರೊ.ಕೇದಾರನಾಥ ಸ್ವಾಮಿ ಮಾತನಾಡಿದರು.
ಪ್ರೊ.ನಾಗರಾಜ್, ಉಪನ್ಯಾಸಕರಾದ ರಾಜ್‌ಕುಮಾರ್, ನಾಗಭೂಷಣ, ತಿಮ್ಮಯ್ಯ, ಇತರರಿದ್ದರು.
ಅಲ್ಲಲ್ಲಿ ಗಣರಾಜ್ಯೊತ್ಸವ: ಹಿರಿಯೂರಿನ ಗ್ರಾಮಾಂತರ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಗ್ರಾ.ಪಂ. ಅಧ್ಯಕ್ಷ ಇಬ್ರಾಹಿಂ ಖಲೀಲ್ ವುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ನಾಗರಾಜ್, ಮುಖ್ಯ ಶಿಕ್ಷಕ ಮಲ್ಲಿಕಾರ್ಜುನಪ್ಪ, ಶಿಕ್ಷಕರಾದ ಚಂದ್ರಣ್ಣ, ಪರಮೇಶ್ವರಪ್ಪ, ಪುಟ್ಟಣ್ಣ, ಕೇಶವಮುರ್ತಿ ಇದ್ದರು.
ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಜಯವೀರಾಚಾರಿ ಧ್ವಜಾರೋಹಣ ನೆರವೇರಿಸಿದರು. ತಾ.ಪಂ. ಸದಸ್ಯ ವೆಂಕಟೇಶ್, ಮುಖ್ಯಶಿಕ್ಷಕ ತುಂಗಭದ್ರಪ್ಪ, ಶಿಕ್ಷಕರಾದ ಪಂಚಾಕ್ಷರಯ್ಯ, ಶಿವಣ್ಣ, ತಿಪ್ಪೇಸ್ವಾಮಿ, ರಾಜ್‌ಕುಮಾರ್ ಇತರರಿದ್ದರು.

ಸಮೀಪದ ಚೌಳೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣವನ್ನು ಟಿ. ಬಸವರಾಜ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಟಿ. ಚೌಡಪ್ಪ ವಹಿಸಿದ್ದರು. ಗ್ರಾ.ಪಂ. ಸದಸ್ಯರಾದ ಎನ್. ಚಿಕ್ಕಣ್ಣ, ಜಿ.ಎನ್. ವೀರೇಶ್‌ಕುಮಾರ್, ಪದವೀಧರ ಮುಖ್ಯಶಿಕ್ಷಕ ಚನ್ನಪ್ಪ, ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು, ಹಾಗೂ ಶಿಕ್ಷಕರು ಗ್ರಾಮಸ್ಥರು ಭಾಗವಹಿಸಿದ್ದರು.

ಹುಳ್ಳಿಕಟ್ಟೆ ದೊಡ್ಡಗೊಲ್ಲರ ಹಟ್ಟಿಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಮಾಂಜನೇಯ ಧ್ವಜಾರೋಹಣ ನೆರವೇರಿಸಿದರು. ಗ್ರಾ.ಪಂ. ಸದಸ್ಯ ಕೃಷ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯರಾದ ದ್ಯಾವಕ್ಕ, ಬಸವರಾಜ್, ಮುಖ್ಯಶಿಕ್ಷಕ ಸೋಮಶೇಖರ್ ಪಾಲ್ಗೊಂಡಿದ್ದರು.

ಪಿ.ಡಿ. ಕೋಟೆ ಗ್ರಾ.ಪಂ.: ಧರ್ಮಪುರ ಸಮೀಪದ ಪಿ.ಡಿ.ಕೋಟೆ ಗ್ರಾಮ ಪಂಚಾಯ್ತಿಯಲ್ಲಿ 63ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ಮಂಜುಳ ಧ್ವಜಾರೋಹಣ ನೆರವೇರಿಸಿದರು. ಪಿಡಿಒ ವಿವೇಕ್ ತೇಜಸ್ವಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್.ಎಲ್. ಗುಣ್ಣಯ್ಯ, ಸದಸ್ಯರಾದ ಚಂದ್ರಣ್ಣ, ರಂಗಮ್ಮ, ಸಿ. ತಿಮ್ಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.

ಚಿಕ್ಕಜಾಜೂರಲ್ಲಿ ಸಡಗರ
ಚಿಕ್ಕಜಾಜೂರಿನ ವಿಶ್ವ ಚೇತನ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಆವರಣದಲ್ಲಿ 63ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಂಸ್ಥೆ ಕಾರ್ಯದರ್ಶಿ ನಾಗರಾಜ್ ಧ್ವಜಾರೋಹಣ ನೆರವೇರಿಸಿದರು.
ಮಕ್ಕಳು ಗಾಂಧೀಜಿ, ನೆಹರು, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಒನಕೆ ಓಬವ್ವ ಮೊದಲಾದ ವಿವಿಧ ವೇಷಭೂಷಣಗಳನ್ನು ಧರಿಸಿ ಪಥ ಸಂಚಲನ ನಡೆಸಿ, ಗಮನ ಸೆಳೆದರು. ಮಕ್ಕಳಿಂದಲೇ ಕಾರ್ಯಕ್ರಮವನ್ನು ನಡೆಸಿದ್ದು ವಿಶೇಷವಾಗಿತ್ತು. ಶಾಲಾ ಶಿಕ್ಷಕ ವೃಂದ ಮತ್ತು ಪೋಷಕರು ಇದ್ದರು.

ಭಾವೈಕ್ಯ ಅಗತ್ಯ
ಹೊಳಲ್ಕೆರೆ: ವಿದ್ಯಾರ್ಥಿಗಳು ರಾಷ್ಟ್ರೀಯ ಭಾವೈಕ್ಯದ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.
ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದಲ್ಲಿ ಗುರುವಾರ ನಡೆದ 63ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಯೋಧರಿಗೆ ಪ್ರೋತ್ಸಾಹ, ಬೆಂಬಲ ಕೊಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಹೇಳಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಆಶ್ರಮದ ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ ಮಾತನಾಡಿ, ಯುವಜನಾಂಗ ದೇಶದ ಶಕ್ತಿ. ಮುಂದೆ ದೇಶವನ್ನು ಮುನ್ನಡೆಸುವ ಗುರುತರ ಜವಾಬ್ದಾರಿ ಯುವಕರ ಮೇಲೆ ಇದೆ ಎಂದರು.

ಎನ್‌ಸಿಸಿ ಅಧಿಕಾರಿ ಆರ್.ಬಿ. ಹಾರೋಮಠ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ನಿವೃತ್ತರಾಗಲಿರುವ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಎಲ್.ಎಸ್. ಶಿವರಾಮಯ್ಯ ಮತ್ತು ಎಸ್. ಧರ್ಮರಾಜೇಶ್ವರ ಅವರನ್ನು ಸನ್ಮಾನಿಸಲಾಯಿತು. ಸಹಾಯಕ ಆಡಳಿತಾಧಿಕಾರಿ ಕೆ.ಡಿ. ಬಡಿಗೇರ ಮತ್ತಿತರರು ಇದ್ದರು.

ದುಮ್ಮಿಯಲ್ಲಿ ಗಣರಾಜ್ಯೋತ್ಸವ: ತಾಲ್ಲೂಕಿನ ದುಮ್ಮಿಯ ಅರುಣೋದಯ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಎಲ್.ಎಂ. ಲಮಾಣಿ ಧ್ವಜಾರೋಹಣ ನೆರವೇರಿಸಿದರು.
ಎಂ.ಜಿ. ಚಂದ್ರಪ್ಪ, ರಾಜಕುಮಾರ್, ಸಂತೋಷ್ ಕುಮಾರ್, ಗುರುಪಾದಪ್ಪ, ಹುರುಕಣ್ಣನವರ್, ಎಸ್.ಎಂ. ಗೌಡ, ಶ್ರೀವತ್ಸ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.