ಮಂಗಳೂರು: ನಗರದ ಕೊಡಿಯಾಲ್‌ಬೈಲ್‌ನ ಕರ್ನಾಟಕ ಬ್ಯಾಂಕ್‌ನ ಬ್ಯಾಂಕಿನ ಹಳೆಯ ಮುಖ್ಯ ಕಚೇರಿ ಸಂಕೀರ್ಣದಲ್ಲಿ ಯಾಂತ್ರಿಕವಾಗಿ ಕಾರ್ಯನಿರ್ವಹಿಸುವ ಎರಡು ಹಂತದ ಕಾರ್ ಪಾರ್ಕಿಂಗ್ ಸೌಲಭ್ಯವನ್ನು ಆರಂಭಿಸಿದೆ. ಒಟ್ಟು 36 ಕಾರ್ ಪಾರ್ಕಿಂಗ್ ಸ್ಲಾಟ್‌ಗಳಲ್ಲಿ, 18 ಘಟಕಗಳು ನೆಲಮಟ್ಟದಲ್ಲಿವೆ. ಇನ್ನೂ 18 ಘಟಕಗಳು ಮೊದಲ ಹಂತದಲ್ಲಿವೆ.
ಹೊಸ ಸೌಲಭ್ಯವನ್ನು ಉದ್ಘಾಟಿಸಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್., ‘ಲಭ್ಯವಿರುವ ಪಾರ್ಕಿಂಗ್ ಸ್ಥಳವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಇದು ಮುಂದಾಲೋಚನೆಯಾಗಿದೆ. ನಗರದ ಈ ಜನನಿಬಿಡ ಸ್ಥಳದಲ್ಲಿ ಹೆಚ್ಚುತ್ತಿರುವ ವಾಹನಗಳ ಪ್ರಮಾಣ ಮತ್ತು ವಿಸ್ತರಣೆಯ ಸ್ಥಳದ ಮಿತಿಯನ್ನು ಗಮನದಲ್ಲಿಟ್ಟುಕೊಂಡು, ಸಾಮರ್ಥ್ಯದ ಬಳಕೆಯಲ್ಲಿ ನಾವು ಒಂದು ಹೆಜ್ಜೆ ಮುಂದಿದ್ದೇವೆ’ ಎಂದು ಹೇಳಿದರು.
ಇದು ದೀರ್ಘಾವಧಿಯಲ್ಲಿ ಪರಿಣಾಮಕಾರಿ ಆಗಲಿದೆ. ಮಂಗಳೂರಿನಲ್ಲಿ ಈ ಸೌಲಭ್ಯವನ್ನು ಆರಂಭಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ನಮ್ಮದಾಗಿದೆ. ಪಾರ್ಕಿಂಗ್ ಸ್ಥಳವನ್ನು ಪರಿಣಾಮಕಾರಿಯಾಗಿ ಬಳಸಲು ಇತರ ಕಾರ್ಪೊರೇಟ್ ಸಂಸ್ಥೆಗಳಿಗೆ ಒಂದು ಉದಾಹರಣೆಯನ್ನು ನೀಡಿದಂತಾಗಿದೆ’ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಾಲಚಂದ್ರ ವೈ.ವಿ., ಮುಖ್ಯ ವ್ಯವಹಾರ ಅಧಿಕಾರಿ ಗೋಕುಲದಾಸ್ ಪೈ, ಮಹಾಪ್ರಬಂಧಕ ಮುರಳೀಧರ್ ಕೃಷ್ಣ ರಾವ್, ಕಾರ್ಯನಿರ್ವಾಹಕ ಅಧಿಕಾರಿಗಳು, ಸಿಬ್ಬಂದಿ, ಸದಸ್ಯರು ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.