ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಕ. ಜಿಲ್ಲೆಯಲ್ಲಿ ಒಟ್ಟು 56 ಮಂದಿ ಗುಣಮುಖ

ಮಹಾರಾಷ್ಟ್ರದಿಂದ ಬಂದ 9 ಮಂದಿ ಸೇರಿ 14 ಜನರಿಗೆ ಕೋವಿಡ್‌–19
Last Updated 31 ಮೇ 2020, 14:55 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಕೋವಿಡ್–19 ನ 4 ಹೊಸ ಪ್ರಕರಣಗಳು ದೃಢವಾಗಿದ್ದರೆ, ಇನ್ನೊಂದೆಡೆ 12 ಜನರು ಕೋವಿಡ್–19 ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು 56 ಮಂದಿ ಗುಣಮುಖರಾದಂತಾಗಿದೆ.

ದುಬೈನಿಂದ ಬಂದಿದ್ದ 5 ಮಂದಿ ಹಾಗೂ ಮಹಾರಾಷ್ಟ್ರದಿಂದ ಬಂದಿದ್ದ 7 ಮಂದಿ ಗುಣಮುಖರಾಗಿದ್ದಾರೆ. ಈ ಪೈಕಿ 3 ಮತ್ತು 11ವರ್ಷದ ಬಾಲಕಿಯರು ಚೇತರಿಸಿಕೊಂಡಿದ್ದು, ಮನೆಗೆ ತೆರಳಿದ್ದಾರೆ.

ದುಬೈನಿಂದ ಬಂದಿದ್ದ 71 ವರ್ಷದ ವೃದ್ಧ, 69 ವರ್ಷದ ವೃದ್ಧೆ, 39 ವರ್ಷದ ಪುರುಷ, 40 ವರ್ಷದ ಪುರುಷರು ಗುಣಮುಖರಾಗಿದ್ದಾರೆ. ದುಬೈನಿಂದ ಮೇ 12 ರಂದು ವಿಮಾನದಲ್ಲಿ ಬಂದಿದ್ದ 76 ವರ್ಷದ ವೃದ್ಧರೊಬ್ಬರಿಗೆ ಮೇ 15 ರಂದು ಸೋಂಕು ದೃಢವಾಗಿತ್ತು. ಇವರಿಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯದ ತೊಂದರೆ ಹಾಗೂ ಕಾಲಿನ ಸೋಂಕು ಹಾಗೂ ಇನ್ನಿತರ ಕಾಯಿಲೆಗಳು ಇದ್ದವು. ವೆನ್ಲಾಕ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು, ಭಾನುವಾರ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

ಕ್ವಾರಂಟೈನ್‌ ಪೂರೈಸಿದವರಿಗೂ ಸೋಂಕು: ವಿದೇಶದಿಂದ ಬಂದ ಇಬ್ಬರು ಹಾಗೂ ಮಹಾರಾಷ್ಟ್ರದಿಂದ ಬಂದ 9 ಜನರು ಸೇರಿದಂತೆ ಒಟ್ಟು 14 ಮಂದಿಗೆ ಶುಕ್ರವಾರ ಕೋವಿಡ್–19 ದೃಢವಾಗಿದೆ.

ಕತಾರ್‌ನಿಂದ ಮೇ 22 ರಂದು ಬೆಂಗಳೂರಿಗೆ ಬಂದು, 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಟ್ಟಿದ್ದ 50 ವರ್ಷದ ಪುರುಷ, ಮೇ 30 ರಂದು ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದರು. ಇವರ ಗಂಟಲು ದ್ರವದ ಮಾದರಿಯಲ್ಲಿ ಕೋವಿಡ್–19 ಇರುವುದು ದೃಢವಾಗಿದೆ.
ಇನ್ನೊಂದೆಡೆ ಮೇ 22 ರಂದು ಮಲೇಷಿಯಾದಿಂದ ಬೆಂಗಳೂರಿಗೆ ಬಂದು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಪೂರ್ಣಗೊಳಿಸಿದ್ದ 38 ವರ್ಷದ ಪುರುಷನಿಗೆ ಇದೀಗ ಸೋಂಕು ದೃಢವಾಗಿದೆ. ಇವರು ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದರು.

ಇದೇ 18 ರಂದು ಮುಂಬೈನಿಂದ ಜತೆಯಲ್ಲಿಯೇ ಬಂದಿದ್ದ 22 ವರ್ಷ, 50 ವರ್ಷ ಹಾಗೂ 52 ವರ್ಷದ ಪುರುಷರು, ಒಂದೇ ಕುಟುಂಬದ ಸದಸ್ಯರಾಗಿರುವ 30 ವರ್ಷ, 44 ವರ್ಷದ ಪುರುಷರಿಗೆ ಸೋಂಕು ಖಚಿತವಾಗಿದೆ. ಇದರ ಜತೆಗೆ ಅಂದೇ ಮುಂಬೈನಿಂದ ಬಂದಿದ್ದ ಒಂದೇ ಕುಟುಂಬದ 40 ವರ್ಷದ ಪುರುಷ ಹಾಗೂ 38 ವರ್ಷದ ಮಹಿಳೆ, ರೋಗಿ ಸಂಖ್ಯೆ 2287 ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಒಂದೇ ಕುಟುಂಬದ 17 ವರ್ಷದ ಬಾಲಕ, 31 ವರ್ಷ ಹಾಗೂ 52 ವರ್ಷದ ಪುರುಷರಿಗೂ ಕೋವಿಡ್–19 ಪಾಸಿಟಿವ್‌ ಬಂದಿದೆ. ಇದೇ 20 ರಂದು ಮುಂಬೈನಿಂದ ಜತೆಯಲ್ಲಿ ಬಂದಿದ್ದ 45 ಹಾಗೂ 43 ವರ್ಷದ ಮಹಿಳೆಗೆ ಸೋಂಕು ತಗಲಿದೆ.

ವರದಿ ಬರುವ ಮೊದಲೇ ಬಿಡುಗಡೆ: ಆತಂಕ

ಮುಂಬೈನಿಂದ ಬಂದ ಬೋಳಿಯಾರು ವ್ಯಕ್ತಿಗೆ ಶನಿವಾರ ಕೋವಿಡ್–19 ಸೋಂಕು ದೃಢವಾಗಿದ್ದು, ಈ ವ್ಯಕ್ತಿಯ ವರದಿ ಬರುವ ಮೊದಲೇ ದೇರಳಕಟ್ಟೆ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಿಂದ ಮನೆಗೆ ಕಳುಹಿಸಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಶನಿವಾರ ಸೋಂಕು ದೃಢವಾದ ನಂತರ ಈ ವ್ಯಕ್ತಿಯನ್ನು ಮನೆಯಿಂದ ಮತ್ತೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಸೋಂಕಿತ ವ್ಯಕ್ತಿ ಇಡೀ ಗ್ರಾಮದಲ್ಲಿ ಓಡಾಡಿದ್ದು, ಇಡೀ ಕುಟುಂಬದ ಜೊತೆಗೆ ಇದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ಗ್ರಾಮದ ಮತ್ತಷ್ಟು ಜನರಿಗೆ ಸೋಂಕು ತಗಲುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT