ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳಾಲ ವ್ಯಾಪ್ತಿಯಲ್ಲಿ 33 ಜನರಿಗೆ ಸೋಂಕು

ಗ್ರಾ.ಪಂ. ಸದಸ್ಯ, ವೈದ್ಯನಿಗೂ ಕೋವಿಡ್‌: 12 ಪೊಲೀಸರು ಗುಣಮುಖ
Last Updated 9 ಜುಲೈ 2020, 16:54 IST
ಅಕ್ಷರ ಗಾತ್ರ

ಉಳ್ಳಾಲ: ನಗರಸಭೆ ವ್ಯಾಪ್ತಿಯಲ್ಲಿ 20 ಸೇರಿದಂತೆ ಒಟ್ಟು ಈ ಪರಿಸರದ 33 ಮಂದಿಯಲ್ಲಿ ಕೋವಿಡ್–19 ದೃಢವಾಗಿದೆ. ಈ ಪೈಕಿ ತಲಪಾಡಿ ಗ್ರಾಮ ಪಂಚಾಯಿತಿ ಸದಸ್ಯ, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವತಲಪಾಡಿ ನಿವಾಸಿ, ಆಸ್ಪತ್ರೆ ಸಿಬ್ಬಂದಿಯೊಬ್ಬರು ಸೇರಿದ್ದಾರೆ.

ಬೆಳ್ಮ ನಿತ್ಯಾನಂದ ನಗರದ 55 ಮಹಿಳೆ, ಜಲಾಲ್‍ಬಾಗ್ ದೇರಳಕಟ್ಟೆಯ 30 ಪುರುಷ, ಕೋಟೆಕಾರಿನ 58ವರ್ಷದ ಮಹಿಳೆ, 54 ವರ್ಷದ ಪುರುಷ, 60 ವರ್ಷದ ಮಹಿಳೆ, ಉಳ್ಳಾಲ ಸುಂದರಿಬಾಗ್‌ನ 56 ವರ್ಷದ ಪುರುಷ, ಉಳ್ಳಾಲ ಕೋಡಿ ಡೌನ್ ರೋಡ್‌ನ 37 ವರ್ಷದ ಪುರುಷ, ಉಳ್ಳಾಲ ಕೋಟೆಪುರ ಮಸೀದಿ ಹಿಂಭಾಗದ ನಿವಾಸಿ 45 ವರ್ಷದ ಪುರುಷ, 54ವರ್ಷದ ಮಹಿಳೆ, 43 ಮಹಿಳೆ, 27 ಹಾಗೂ 30ವರ್ಷದ ಯುವತಿಯರು, ಉಳ್ಳಾಲ ಮುಕ್ಕಚ್ಚೇರಿ 45 ವರ್ಷದ ವ್ಯಕ್ತಿ, 26 ಯುವತಿ, 50ವರ್ಷದ ವ್ಯಕ್ತಿ, ಉಳ್ಳಾಲ ಕಾಪಿಕಾಡಿನ 25ರ ಯುವಕ, ಸುಭಾಷ್ ನಗರದ 43 ವರ್ಷದ ವ್ಯಕ್ತಿ , ಉಳ್ಳಾಲ ಮೊಗವೀರಪಟ್ಣದ 15 ವರ್ಷದ ಬಾಲಕ, 41 ಮಹಿಳೆ, 23 ವರ್ಷದ ಯುವತಿ, ಉಳ್ಳಾಲ ವಿದ್ಯಾರ್ಥಿನಿಲಯದ 18 ವರ್ಷದ ಯುವತಿ, ಉಳ್ಳಾಲಬೈಲಿನ 72 ವರ್ಷದ ವೃದ್ಧ, ಮಾಸ್ತಿಕಟ್ಟೆ 42ವರ್ಷದ ಮಹಿಳೆ, ಆಸ್ಪತ್ರೆ ಸಿಬ್ಬಂದಿಯಾಗಿರುವ ತೊಕ್ಕೊಟ್ಟು ಚೆಂಬುಗುಡ್ಡೆಯ 32 ವರ್ಷದ ಮಹಿಳೆ ಕೋವಿಡ್–19 ದೃಢವಾಗಿದೆ.

ಪೊಲೀಸರು ಬಿಡುಗಡೆ: ಕೋವಿಡ್‌–19 ಸೋಂಕಿತರಾಗಿದ್ದ ಉಳ್ಳಾಲ ಠಾಣೆಯ 12 ಮಂದಿ ಪೊಲೀಸರ ವರದಿ ನೆಗೆಟಿವ್ ಬಂದಿದ್ದು, ಎಲ್ಲರನ್ನೂ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಮನೆಯಲ್ಲೇ ಕ್ವಾರಂಟೈನ್ ಇರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT