ಗುರುವಾರ , ನವೆಂಬರ್ 26, 2020
19 °C
ಪೆರ್ನೆ: ಹೆದ್ದಾರಿ ದರೋಡೆ

ಅಡಿಕೆ ವ್ಯಾಪಾರಿಗೆ ಚೂರಿಯಿಂದ ಇರಿದು, ₹4 ಲಕ್ಷ ಲೂಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಪೆರ್ನೆಯಲ್ಲಿ ಮಂಗಳವಾರ ರಾತ್ರಿ ಅಡಿಕೆ ವ್ಯಾಪಾರಿ ಪದೆಬರಿ ದೀಪಕ್ ಶೆಟ್ಟಿ ಅವರಿಗೆ ಚೂರಿಯಿಂದ ಇರಿದು ₹4 ಲಕ್ಷ ದೋಚಲಾಗಿದೆ.

ಇವರು ಪೆರ್ನೆಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದು, ರಾತ್ರಿ ಅಂಗಡಿ ಮುಚ್ಚಿ ಬೈಕಿನಲ್ಲಿ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ತಂಡವು ಕೃತ್ಯ ಎಸಗಿ ಪರಾರಿ ಆಗಿದೆ. ಚೂರಿಯಿಂದ ತಿವಿಯಲ್ಪಟ್ಟ ದೀಪಕ್ ಶೆಟ್ಟಿ ಸ್ಥಿತಿ ಗಂಭೀರವಾಗಿದೆ.

ದೀಪಕ್ ಶೆಟ್ಟಿ ತಲೆ ಹಾಗೂ ಹೊಟ್ಟೆಗೆ ಚೂರಿಯಿಂದ ತಿವಿದು, ಹಣವನ್ನು ದೋಚಿದ್ದು,  ಖಚಿತ ಮಾಹಿತಿ ಹೊಂದಿದವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.  ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದಾರೆ. ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು