ಶುಕ್ರವಾರ, ಮೇ 7, 2021
26 °C
ಮತ್ತೆ ಮೂರು ಕಂಟೈನ್‌ಮೆಂಟ್‌ ವಲಯ

ಕೋವಿಡ್: ದ.ಕ.ದಲ್ಲಿ 4 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮೃತಪಟ್ಟಿರುವ ನಾಲ್ವರಿಗೆ ಕೋವಿಡ್–19 ಇರುವುದು ಮಂಗಳವಾರ ದೃಢಪಟ್ಟಿದೆ. ಇದ ರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 764ಕ್ಕೇರಿದೆ. ಜಿಲ್ಲೆಯಲ್ಲಿ ಮಂಗಳವಾರ 985 ಮಂದಿಗೆ ಕೋವಿಡ್ ದೃಢವಾಗಿದ್ದು, ಬಂದಿದೆ. ಮೂರು ಕಂಟೈನ್ಮೆಂಟ್ ವಲಯವನ್ನು ಘೋಷಣೆ ಮಾಡಲಾಗಿದೆ.

ಮೃತಪಟ್ಟ ನಾಲ್ವರು ಹಿರಿಯ ನಾಗರಿಕರಾಗಿದ್ದು, ನಗರದ ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ನಗರದ ಪದವಿನಂಗಡಿಯ ಒಂದು ಮನೆಯ 6 ಮಂದಿಗೆ, ನಾವೂರು ಪರ್ಲ ಚರ್ಚ್ ಹತ್ತಿರದ ಒಂದು ಮನೆಯ 5 ಮಂದಿಗೆ, ಬೆಳ್ತಂಗಡಿಯ ಬಳ್ಳಂಜ ಕುಕ್ಕುದಡ್ಕದ ಒಂದು ಮನೆಯ 5 ಮಂದಿಗೆ ಕೋವಿಡ್ ದೃಢವಾಗಿದ್ದು, ಮೂರು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ.

ಲಸಿಕೆ: ಜಿಲ್ಲೆಯಲ್ಲಿ ಮಂಗಳವಾರ 1,184 ಮಂದಿ ಕೋವಿಡ್ ನಿರೋಧಕ ಲಸಿಕೆಯನ್ನು ಪಡೆದಿದ್ದಾರೆ. 2–3 ದಿನಗಳಿಂದ ಲಸಿಕೆಯ ಅಭಾವ ಕಾಡಿತ್ತು. ಮಂಗಳವಾರ 7 ಸಾವಿರ ಡೋಸ್‌ ಲಸಿಕೆ ಜಿಲ್ಲೆಗೆ ಬಂದಿದ್ದು, ಬುಧವಾರದಿಂದ ಜಿಲ್ಲೆಯ ತಾಲ್ಲೂಕು, ಜಿಲ್ಲಾಸ್ಪತ್ರೆಯ ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರ ಮಟ್ಟದಲ್ಲೂ ಲಸಿಕೆ ನೀಡಲಾಗುತ್ತದೆ. ಈಗ ಎರಡನೇ ಡೋಸ್‌ಗೆ ಮಾತ್ರ ಅವಕಾಶವಿದ್ದು, ಮೊದಲ ಡೋಸ್ ಪಡೆಯುವವರಿಗೆ ಸದ್ಯಕ್ಕೆ ಅವಕಾಶವಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಸರಗೋಡಿನಲ್ಲಿ 673 ಪ್ರಕರಣ: ಕಾಸರಗೋಡು ಜಿಲ್ಲೆಯಲ್ಲಿ 673 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು, 98 ಮಂದಿ ಗುಣಮುಖರಾಗಿದ್ದಾರೆ. ಸದ್ಯ 12,370 ಸಕ್ರಿಯ ಪ್ರಕರಣ ಗಳಿದ್ದು, 15,685 ಮಂದಿ ನಿಗಾದಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.