ಸೋಮವಾರ, ಆಗಸ್ಟ್ 15, 2022
22 °C
ಐಎಲ್‌ಐ, ಪ್ರಾಥಮಿಕ ಸಂಪರ್ಕದಿಂದಲೇ ಹೆಚ್ಚಿನ ಜನರಿಗೆ ಸೋಂಕು

446 ಜನರಿಗೆ ಕೋವಿಡ್‌–19 ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಕೋವಿಡ್–19 ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, 446 ಜನರಿಗೆ ಸೋಂಕು ದೃಢವಾಗಿದೆ. ಈ ಮಧ್ಯೆ 197 ಜನರು ಗುಣಮುಖರಾಗಿದ್ದಾರೆ. ಏಳು ಮಂದಿ ಮೃತಪಟ್ಟಿದ್ದು, ಅವರಿಗೆ ಕೋವಿಡ್ ಇರುವುದು ಖಚಿತವಾಗಿದೆ.

ಒಟ್ಟು ಸೋಂಕಿತರದಲ್ಲಿ ಮಂಗಳೂರು ತಾಲ್ಲೂಕಿನ 248, ಬಂಟ್ವಾಳ ತಾಲ್ಲೂಕಿನ 85, ಪುತ್ತೂರು ತಾಲ್ಲೂಕಿನ 13, ಸುಳ್ಯ ತಾಲ್ಲೂಕಿನ 23, ಬೆಳ್ತಂಗಡಿ ತಾಲ್ಲೂಕಿನ 52 ಹಾಗೂ ಬೇರೆ ಜಿಲ್ಲೆಗಳ 25 ಜನರು ಸೇರಿದ್ದಾರೆ. ಈ ಪೈಕಿ 139 ಪುರುಷರು ಹಾಗೂ 73 ಮಹಿಳೆಯರು ಸೇರಿದಂತೆ 212 ಜನರಿಗೆ ರೋಗಲಕ್ಷಣಗಳಿವೆ. 131 ಪುರುಷರು ಹಾಗೂ 103 ಮಹಿಳೆಯರು ಸೇರಿದಂತೆ 234 ಜನರಿಗೆ ರೋಗ ಲಕ್ಷಣಗಳಿಲ್ಲ.

170 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢವಾಗಿದ್ದು, 177 ಜನರಲ್ಲಿ ಶೀತಜ್ವರ (ಐಎಲ್‌ಐ) ಲಕ್ಷಣದಿಂದ ಕೋವಿಡ್–19 ಪತ್ತೆಯಾಗಿದೆ. 11 ಜನರಲ್ಲಿ ತೀವ್ರ ಉಸಿರಾಟದ ತೊಂದರೆ ಇದ್ದು, 88 ಜನರ ಸೋಂಕಿನ ಮೂಲವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

197 ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಶುಕ್ರವಾರ 197 ಜನರ ಗಂಟಲು ದ್ರವ ಮಾದರಿಯ ವರದಿ ನೆಗೆಟಿವ್ ಬಂದಿದದು, ಅವರನ್ನು ಬಿಡುಗಡೆ ಮಾಡಲಾಗಿದೆ.

ಹೋಂ ಐಸೋಲೇಷನ್‌ನಲ್ಲಿದ್ದ 153 ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 44 ಜನರು ಗುಣಮುಖರಾಗಿದ್ದಾರೆ. ಅವರನ್ನು 14 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಏಳು ಸಾವು: ಜಿಲ್ಲೆಯಲ್ಲಿ ಏಳು ಜನರು ಮೃತಪಟ್ಟಿದ್ದು, ಅವರಿಗೆ ಕೋವಿಡ್ ಇರುವುದು ಶುಕ್ರವಾರ ಖಚಿತವಾಗಿದೆ. ಅನಾರೋಗ್ಯದ ಸಮಸ್ಯೆಯಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಗಳೂರು ತಾಲ್ಲೂಕಿನ 3, ಬೇರೆ ಜಿಲ್ಲೆಗಳ ನಾಲ್ವರು ಮೃತಪಟ್ಟಿದ್ದಾರೆ.

ಕಾಸರಗೋಡು: 102 ಮಂದಿಗೆ ಕೋವಿಡ್

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 102 ಮಂದಿಗೆ ಕೋವಿಡ್-19 ದೃಢವಾಗಿದೆ. 100 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಇತರ ರಾಜ್ಯಗಳಿಂದ ಬಂದ ಇಬ್ಬರಲ್ಲಿ ಕೋವಿಡ್‌ ಪತ್ತೆಯಾಗಿದೆ. ಶುಕ್ರವಾರ 131 ಮಂದಿಗೆ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು