ಪುತ್ತೂರು: ‘ಪುತ್ತೂರನ್ನು ಗ್ರಾಮಾಂತರ ಜಿಲ್ಲೆಯಾಗಿ ಘೋಷಣೆ ಮಾಡುವುದು ಸೇರಿಂದತೆ ವಿವಿಧ ಬೇಡಿಕೆಗಳನ್ನು ಭಾನುವಾರ ಇಲ್ಲಿಗೆ ಭೇಟಿ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು’ಎಂದು ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾಲ್ಕೂವರೆ ವರ್ಷಗಳಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳು, ನೂತನ ಬೇಡಿಕೆಗಳ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಮಾತನಾಡುವರು’ ಎಂದರು.

‘ಪುತ್ತೂರಿನಲ್ಲಿ ಸರ್ಕಾರಿ ಮೆಡಿ ಕಲ್ ಕಾಲೇಜು ಸ್ಥಾಪನೆ, ಅಂತರ ರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ಸ್ಥಾಪನೆ, ಹಿರೆಬಂಡಾಡಿ- ಬೆಳ್ಳಿಪ್ಪಾಡಿ ನಡುವೆ ₹32 ಕೋಟಿ ವೆಚ್ಚದ ಕಿಂಡಿಅಣೆಕಟ್ಟು, ಪೆರ್ನೆ ಬಿಳಿಯೂರು-ಬಳಿ ₹20ಕೋಟಿ ವೆಚ್ಚದ ಕಿಂಡಿಅಣೆಕಟ್ಟು ಮೂಲಕ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನು ಷ್ಟಾನ, ಕಾಮಜಾಲು- ಮಾಣಿಲ ನಡುವೆ ₹12 ಕೋಟಿ ವೆಚ್ಚದ ಸೇತುವೆ ನಿರ್ಮಾಣ ವನ್ನು ಮುಖ್ಯಮಂತ್ರಿಗೆ ಪ್ರಸ್ತಾವಸಲ್ಲಿಸಲಿದ್ದೇನೆ’ ಎಂದು ಶಾಸಕಿ ತಿಳಿಸಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಬಡಗ ನ್ನೂರು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಮಾನಾಥ ವಿಟ್ಲ, ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಸೀಫ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಕಾಂಗ್ರೆಸ್ ಬಿಡಲ್ಲ: ಶಾಸಕಿ

ಪುತ್ತೂರು : ‘ಬಿಜೆಪಿಯಿಂದ ಹೊರಬಂದಿದ್ದ ನನ್ನನ್ನು ಕರೆದು ಶಾಸಕಿಯನ್ನಾಗಿ ಮಾಡಿ ಸಂಸದೀಯ ಕಾರ್ಯದರ್ಶಿ ಜವಾಬ್ದಾರಿ ನೀಡಿರುವುದು ಕಾಂಗ್ರೆಸ್ ಪಕ್ಷ. ಇದನ್ನು ತೊರೆದು ನಾನ್ಯಾಕೆ ಮತ್ತೆ ಬಿಜೆಪಿ ಹೋಗಲಿ. ಸುಳ್ಳು ಸುದ್ದಿ ಹರಡುತ್ತಿದ್ದಾರೆ’ ಎಂದು ಶಾಸಕಿ ಶಕುಂತಳಾ ಶೆಟ್ಟಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

‘ಶಕುಂತಳಾ ಶೆಟ್ಟಿ ಬಿಜೆಪಿಗೆ ಹೋಗುತ್ತಾರೆ ಎಂಬ ಸುದ್ದಿ ಹರಡುತ್ತಿದೆ. ಈ ಬಗ್ಗೆ ನಿಲುವೇನು’ ಎಂದು ಶುಕ್ರವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.

‘ಸಂಪ್ಯ ಎಸ್‍ಐ ಅಬ್ದುಲ್ ಖಾದರ್ ಒಳ್ಳೆಯವರೋ, ಕೊಟ್ಟವರೋ ಎಂಬುವುದು ಗೊತ್ತಿಲ್ಲ. ಅವರನ್ನು ಉಳಿಸಿ ಅಥವಾ ಕಳಿಸಿ ಎಂದು ಹೇಳಿಲ್ಲ. ನ್ಯಾಯಯುತ ತೀರ್ಮಾನ ಕೈಗೊಳ್ಳಿ ’ ಎಂದು ಇಲಾಖೆಯ ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದು ಶಾಸಕಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.