ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಪ್ರಕಾರದ ವೀಸಾದಾರರಿಗೆ ಯುಎಇ ಪ್ರಯಾಣ

ಶೀಘ್ರವೇ ನಿರ್ಧಾರ ಪ್ರಕಟ: ಪವನ್‌ ಕಪೂರ್‌
Last Updated 6 ಆಗಸ್ಟ್ 2020, 15:44 IST
ಅಕ್ಷರ ಗಾತ್ರ

ಮಂಗಳೂರು: ಎಲ್ಲ ಪ್ರಕಾರಗಳ ವೀಸಾ ಹೊಂದಿರುವವರು ಭಾರತದಿಂದ ಯುಎಇಗೆ ಪ್ರಯಾಣಿಸಲು ಅವಕಾಶ ನೀಡುವುದಕ್ಕೆ ಸಂಬಂಧಿಸಿದ ನಿರ್ಧಾರ ಶೀಘ್ರ ಪ್ರಕಟವಾಗಲಿದೆ ಎಂದು ಯುಎಇಗೆ ಭಾರತದ ರಾಯಭಾರಿ ಪವನ್ ಕಪೂರ್ ಹೇಳಿದ್ದಾರೆ.

‘ಹೊಸ ವೀಸಾಗಳ ವಿತರಣೆಯನ್ನು ಯುಎಇ ಇತ್ತೀಚೆಗೆ ಆರಂಭಿಸಿದ್ದು, ಸೂಕ್ತ ವೀಸಾಗಳನ್ನು ಹೊಂದಿರುವ ಭಾರತೀಯರಿಗೆ ಯುಎಇಗೆ ಪ್ರಯಾಣಿಸಲು ಅವಕಾಶ ನೀಡುವ ಬಗ್ಗೆ ಪರಿಶೀಲಿಸುವಂತೆ ಭಾರತದ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ. ಈ ಬಗ್ಗೆ ಶೀಘ್ರ ನಿರ್ಧಾರ ಹೊರಬೀಳುವ ವಿಶ್ವಾಸವಿದೆ’ ಎಂದು ಪವನ್ ಕಪೂರ್ ಟ್ವೀಟ್ ಮಾಡಿದ್ದಾರೆ.

‘ಈ ಕುರಿತ ನಿರ್ಧಾರ ಹೊರಬಿದ್ದ ಬಳಿಕ, ಯುಎಇಯಲ್ಲಿ ಕುಟುಂಬ ಸದಸ್ಯರನ್ನು ಹೊಂದಿರುವವರಿಗೆ ಮತ್ತು ಇನ್ನೂ ಪಾಸ್‌ಪೋರ್ಟ್‌ಗಳಿಗೆ ಜೋಡಣೆಯಾಗದ ನೂತನ ವಾಸ್ತವ್ಯ ವೀಸಾಗಳನ್ನು ಹೊಂದಿರುವವರಿಗೆ ಯುಎಇಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು’ ಎಂದು ದುಬೈಯಲ್ಲಿರುವ ಭಾರತೀಯ ಕೌನ್ಸುಲ್ ಜನರಲ್ ಡಾ. ಅಮನ್ ಪುರಿ ಹೇಳಿದರು. ‘ಆದರೆ, ಈ ವಿನಾಯಿತಿಯು ‘ಕೆಲಸ ಹುಡುಕುವ’ ಉದ್ದೇಶದಿಂದ ಯುಎಇಗೆ ಬರುವವರಿಗೆ ಅನ್ವಯಿಸುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈಗಲೂ ಭಾರತದಲ್ಲಿ ಉಳಿದಿರುವ ಯುಎಇ ವಲಸಿಗರಿಗೆ ರಾಯಭಾರಿ ಕಚೇರಿಯ ಈ ಘೋಷಣೆಯು ವರದಾನವಾಗಿದೆ. ಯುಎಇಯಲ್ಲಿರುವ ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಾಗುವುದಕ್ಕೆ ಹಾಗೂ ತಮ್ಮ ಕೆಲಸಕ್ಕೆ ಮರಳಲು ಅನೇಕ ಜನರು ಎದುರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT