ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ‌ ಅವಕಾಶ ಕಲ್ಪಿಸಿ: ನಳಿನ್‌ ಕುಮಾರ್‌

Published 10 ಜೂನ್ 2023, 9:09 IST
Last Updated 10 ಜೂನ್ 2023, 9:09 IST
ಅಕ್ಷರ ಗಾತ್ರ

ಮಂಗಳೂರು: 'ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ‌ ಅವಕಾಶ ಕಲ್ಪಿಸಬೇಕು' ಎಂದು ಬಿಜೆಪಿ‌ ರಾಜ್ಯ ಘಟಕದ‌ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಒತ್ತಾಯಿಸಿದರು.

ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, 'ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳೇ ಜಾಸ್ತಿ. ಖಾಸಗಿ ಬಸ್ ಗಳಲ್ಲಿ ಸಂಚರಿಸುವ ಮಹಿಳೆಯರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಬಿಜೆಪಿಯು ಮಹಿಳೆಯರ ಜೊತೆ ಸೇರಿಕೊಂಡು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ' ಎಂದರು.

'ಕಾಂಗ್ರೆಸ್‌ ಪಕ್ಷವು ಗ್ಯಾರಂಟಿಗಳನ್ನು ಘೋಷಿಸುವಾಗ ಯಾವುದೇ ಮಾರ್ಗಸೂಚಿ ಗಳ ಬಗ್ಗೆ ಹೇಳಿರಲಿಲ್ಲ. ತಮಗೂ ಸೇರಿದಂತೆ ಎಲ್ಲರಿಗೂ ಗ್ಯಾರಂಟಿಗಳ ಪ್ರಯೋಜನ‌ ಸಿಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಈಗ ಎಲ್ಲ ಗ್ಯಾರಂಟಿಗಳಿಗೂ ಮಾರ್ಗಸೂಚಿ ಜಾರಿಗೊಳಿಸುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ‌ ಆಗುತ್ತಿದೆ. ತಿಂಗಳಿಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲು ಮಾರ್ಗಸೂಚಿ ಹಾಕಿ ವಂಚಿಸಲಾಗುತ್ತಿದೆ. ಇದೊಂದು ವಂಚಕರ‌ ಹಾಗೂ ಮೋಸಗಾರರ ಸರ್ಕಾರ' ಎಂದು ಟೀಕಿಸಿದರು.

'ಈ ಸರ್ಕಾರ ಬಂದ ಬಳಿಕ ಮೂರು ಕೊಡುಗೆಗಳನ್ನು ನೀಡಿದೆ.. ಇಂಧನ ಇಲಾಖೆ ನೌಕರರಿಗೆ ಏಟಿನ ಭಾಗ್ಯ, ಮನೆಯ ಯಜಮಾನಿ ಯಾರು ಎಂಬ ವಿಚಾರಕ್ಕೆ ಅತ್ತೆ -ಸೊಸೆ ನಡುವೆ ಜಗಳ ಭಾಗ್ಯ ಹಾಗೂ ಸಾರ್ವಜನಿಕರಿಗೆ ಕಾಯುವ ಭಾಗ್ಯ ಸಿಕ್ಕಿವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ‌ ಬಂದ‌ ಬಳಿಕ ಸರ್ಕಾರದ ತಪ್ಪು ಧೋರಣೆಯಿಂದ ಇಷ್ಟು ದಿನ‌ ಇಂಧನ‌ ಇಲಾಖೆ‌ ನೌಕರರು ಏಟು ತಿನ್ನುತ್ತಿದ್ದರು. ಇನ್ನು ಸಾರಿಗೆ ಇಲಾಖೆ ನೌಕರರು ಹಾಗೂ ಬ್ಯಾಂಕ್ ಸಿಬ್ಬಂದಿ ಏಟು ತಿನ್ನಲಿದ್ದಾರೆ' ಎಂದರು‌.

'ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೇ ಗ್ಯಾರಂಟಿ ಇಲ್ಲ. ಕಾಂಗ್ರೆಸ್ ನಲ್ಲೂ ಒಳಜಗಳಗಳು ಪ್ರಾರಂಭವಾಗಿವೆ. ಯಾವಾಗ ಯಾವ ಗುಂಪು ಹೊರಗೆ ಬರುತ್ತದೆ ಎಂದು ಕಾಯುವ ಸ್ಥಿತಿ ‌ಇದೆ' ಎಂದರು.

'ಜೂನ್ 1 ರಿಂದಲೇ 200 ಯೂನಿಟ್‌ ವಿದ್ಯುತ್‌ ಉಚಿತ ಎಂದು ಹೇಳಿದ್ದರು. ಆದರೆ, ಈ ಸರ್ಕಾರ‌ ಅಧಿಕಾರಕ್ಕೆ ಬಂದ‌ ಬಳಿಕ ವಿದ್ಯುತ್ ಬಿಲ್ ಹತ್ತು ಪಟ್ಟು ಹೆಚ್ಚಾಗಿದೆ. ಗ್ರಾಹಕರು ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ. ನಿಮ್ಮ ಜೊತೆ ಬಿಜೆಪಿ ಇದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT