ಪೇಜ್ ಸಂಸ್ಥೆಯ ಡಾ. ಪ್ರಭಾ ಅಧಿಕಾರಿ ಮಾತನಾಡಿ, ‘ಮೆರವಿನ ಕಾಯಿಲೆ ಬಂದ ಮೇಲೆ ಗುಣ ಮಾಡುವುದು ಕಷ್ಟ. ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡ ಹಂತದಲ್ಲಿ ಚಿಕಿತ್ಸೆ ನೀಡಿದಲ್ಲಿ, ಗುಣಪಡಿಸಲು ಸಾಧ್ಯವಿದೆ. ಮಂಗಳೂರು ನಗರದಲ್ಲಿ ಸುಮಾರು 5,000 ಮಂದಿ ಈ ಕಾಯಿಲೆಯಿಂದ ಬಳಲುತ್ತಿದ್ದು, ಸಾಮಾನ್ಯವಾಗಿ 75ರಿಂದ 90 ವರ್ಷ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 75 ವರ್ಷದ ನಂತರ ಸಾಮಾನ್ಯವಾಗಿ ಮನುಷ್ಯ ದೈಹಿಕವಾಗಿ ದುರ್ಬಲನಾಗುವ ಕಾರಣ ಮನೆಯಲ್ಲೇ ಕುಳಿತು ಖಿನ್ನತೆ, ಶ್ರವಣ, ದೃಷ್ಟಿ ದೋಷ ಇಂತಹ ಸಮಸ್ಯೆಗಳು ಬರುತ್ತವೆ. ಇದನ್ನು ನಿರ್ಲಕ್ಷಿಸಿದರೆ, ಮರೆಗುಳಿತನ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ’ ಎಂದರು.