ಸೋಮವಾರ, ಸೆಪ್ಟೆಂಬರ್ 27, 2021
21 °C
ಅರೆಭಾಷೆ ಸಂಸ್ಕೃತಿ ಶಿಬಿರ ಉದ್ಘಾಟಿಸಿದ ಲಕ್ಷ್ಮೀನಾರಾಯಣ

ಭಾಷೆ, ಸಂಸ್ಕೃತಿ ಉಳಿವು ಎಲ್ಲರ ಜವಾಬ್ದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಬ್ರಹ್ಮಣ್ಯ: ‘ಹಿಂದಿನ ಕಾಲದ ಸಾಂಪ್ರದಾಯಿಕ ಆಚರಣೆಗಳು ಇಂದಿನ ಮಕ್ಕಳಿಗೆ ಕಾಣಲು ಸಾಧ್ಯವಾಗುತ್ತಿಲ್ಲ. ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ಎಲ್ಲರ ಜವಾಬ್ದಾರಿ ಆಗಬೇಕಿದೆ’ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಏನೆಕಲ್ಲು ಗ್ರಾಮದ ಅರೆಭಾಷೆ ಬಾಂಧವರ ಆಶ್ರಯದಲ್ಲಿ ನಡೆದ ಅರೆಭಾಷೆ ಸಂಸ್ಕೃತಿ ಶಿಬಿರದಲ್ಲಿ ಅವರು ಮಾತನಾಡಿದರು.

ರಾಜ್ಯದ ಹಲವಾರು ಪ್ರಾದೇಶಿಕ ಭಾಷೆಗಳು ವಿವಿಧ ಕಾರಣಗಳಿಂದ ಅಳಿವಿನ ಅಂಚಿನಲ್ಲಿವೆ. ಭಾಷೆಗಳು ವಿನಾಶವಾದಲ್ಲಿ ಆ ಭಾಷೆಯನ್ನು ಆಡುವ ಸಮುದಾಯ ನಾಶವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಶಿಬಿರ ಉದ್ಘಾಟಿಸಿ ಮಾತನಾಡಿದ ಏನೆಕಲ್ಲು ಗ್ರಾಮ ಮಾಗಣಿ ಗೌಡ ಉದಯ ಕುಮಾರ್ ಬಾನಡ್ಕ, ಅರೆಭಾಷೆ ಬಾಂಧವರ ಆಚಾರ, ವಿಚಾರಗಳನ್ನು ಮತ್ತೊಮ್ಮೆ ಇಂದಿನ ಜನಾಂಗಕ್ಕೆ ತಿಳಿಸುವ ಅಗತ್ಯ ಇದೆ ಎಂದರು.

ಏನೆಕಲ್ಲು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಭವಾನಿ ಶಂಕರ ಪೂಂಬಾಡಿ, ಕುಲ್ಕುಂದ ಬಸವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರಿಧರ ಸ್ಕಂದ, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸದಸ್ಯರಾದ ಮೋಹನ ಕೋಟಿ ಗೌಡನ ಮನೆ, ಜಯಂತಿ ವೆಂಕಟೇಶ್ ಪರಮಲೆ, ಭವ್ಯಾ ಕುಮಾರಿ, ದಿಲೀಪ್ ಉಪ್ಪಳಿಕೆ, ಶಿವರಾಮ ನೆಕ್ರಾಜೆ, ಅಕಾಡೆಮಿ ಸದಸ್ಯರಾದ ಜಯಪ್ರಕಾಶ್ ಮೋಂಟಡ್ಕ, ದಯಾನಂದ ಹೊಸಂಗಡಿಬೈಲು, ಚಂದ್ರಶೇಖರ ಮುತ್ಲಾಜೆ, ಶಿವರಾಮ ಏನೆಕಲ್ಲು, ಪೂರ್ಣಚಂದ್ರ, ಚಂದ್ರಶೇಖರ, ನಾಗರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು