ಕಡಬ(ಉಪ್ಪಿನಂಗಡಿ): ಇಲ್ಲಿನ ಬಲ್ಯ ರಕ್ಷಿತಾರಣ್ಯದಲ್ಲಿ ಬೇಟೆಯಾಡಿ ಕೊಂದ ಪ್ರಾಣಿಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.
ನೆಲ್ಯಾಡಿಯ ಬಿನು, ದಿನೇಶ್ ಹಾಗೂ ನವೀನ್ ಬಂಧಿತರು. ಕುಂತೂರು ಬಳಿ ಇನ್ನೋವಾ ಕಾರೊಂದು ಅನುಮಾನಾಸ್ಪದ ರೀತಿಯಲ್ಲಿ ನಿಂತಿರುವುದನ್ನು ಕಂಡು ಪರಿಶೀಲಿಸಿದಾಗ ವಾಹನದಲ್ಲಿ ಎರಡು ಬರಿಂಕ, 1 ಮುಳ್ಳುಹಂದಿ, 1 ಬೆರು ಜಾತಿಯ ಪ್ರಾಣಿಗಳು ಮತ್ತು 1 ನಾಡ ಕೋವಿ ಪತ್ತೆಯಾಗಿದೆ.
ಬರಿಂಕ ಅಳಿವಿನಂಚಿನಲ್ಲಿರುವ ವನ್ಯ ಜೀವಿಯಾಗಿದೆ. ಆದರೆ, ಪೊಲೀಸರು ಈ ಪ್ರಕರಣವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸದೆ, ವನ್ಯ ಜೀವಿಗೆ ಸಂಬಂಧ ಪಡದ, ಆರೋಪಿಗಳಿಗೆ ಸುಲಭವಾಗಿ ಜಾಮೀನು ದೊರಕುವ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಆರೋಪಿಗಳಿಗೆ ಜಾಮೀನು ಲಭಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.