ಕಣಿಯೂರು ಗ್ರಾಮದ ಸಿದ್ದಿಕ್ ಹಲ್ಲೆಗೆ ಒಳಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆರೋಪಿ ಶರತ್ ವಿರುದ್ಧ ಪ್ರಕರಣ ದಾಖಲಾಗಿದೆ. ಸಿದ್ದಿಕ್ ತನ್ನ ಗೂಡ್ಸ್ ವಾಹನವನ್ನು ಕಲ್ಲೇರಿಯಿಂದ ಪದ್ಮುಂಜ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಆರೋಪಿ ಶರತ್ ರಸ್ತೆ ಬದಿಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದು. ಇದೇ ವೇಳೆ ವಿರುದ್ಧ ದಿಕ್ಕಿನಿಂದ ಬೇರೆ ವಾಹನ ಬಂದಿದ್ದು, ಆ ವಾಹನಕ್ಕೆ ದಾರಿ ಬಿಡುವ ಸಲುವಾಗಿ ರಸ್ತೆಯ ಅಂಚಿನಲ್ಲಿ ಹೋಗಿದ್ದು, ಇದನ್ನು ಶರತ್ ಆಕ್ಷೇಪಿಸಿ ನಿಂದಿಸಿದ್ದಾರೆ. ಬೈಕ್‌ನಲ್ಲಿ ಬಂದ ಶರತ್, ಗೂಡ್ಸ್ ವಾಹನವನ್ನು ತಡೆದು ಹಲ್ಲೆ ನಡೆಸಿರುವುದಾಗಿ ಸಿದ್ದಿಕ್ ದೂರಿನಲ್ಲಿ ಆಪಾದಿಸಿದ್ದಾರೆ.