ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024: ಸಸಿಹಿತ್ಲು ಬೀಚ್‌ನಲ್ಲಿ ಮತದಾನ ಜಾಗೃತಿ

Published 22 ಏಪ್ರಿಲ್ 2024, 14:05 IST
Last Updated 22 ಏಪ್ರಿಲ್ 2024, 14:05 IST
ಅಕ್ಷರ ಗಾತ್ರ

ಮೂಲ್ಕಿ: ಆಯೋಗ, ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಸ್ವೀಪ್ ಸಮಿತಿ, ಮೂಲ್ಕಿ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ವತಿಯಿಂದ ಸಸಿಹಿತ್ಲು ಮುಂಡ ಬೀಚ್‌ನಲ್ಲಿ ಮತದಾನ ಜಾಗೃತಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆನಂದ ಕೆ.ಅವರು ಕಾರ್ಯಕ್ರಮ ಉದ್ಘಾಟಿಸಿ, ಎಲ್ಲರೂ ಮತ ಚಲಾಯಿಸಬೇಕು ಎಂದು ಹೇಳಿದರು.

ಮೂಲ್ಕಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗುರುದತ್ ಎಂ.ಎನ್.ಮಾತನಾಡಿದರು.

ಬಳಿಕ ಪ್ರಕಾಶ್ ಆಚಾರ್ಯ, ಶ್ವೇತಾ ಆಚಾರ್ಯ ಅವರಿಂದ ಸಂಗೀತ ರಸಸಂಜೆ, ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ನೃತ್ಯ, ಮೆಹೆಂದಿ ಕಾರ್ಯಕ್ರಮ, ಸೆಲ್ಫಿ ಪಾಯಿಂಟ್, ಸಹಿ ಅಭಿಯಾನ, ಮರಳು ಕಲಾಕೃತಿ, ವಿದ್ಯುತ್ ದ್ವೀಪದಿಂದ ಸ್ವೀಪ್ ಅಕ್ಷರ, ಗಾಳಿಪಟ ಉತ್ಸವ, ಪಂಜಿನ ಮೆರವಣಿಗೆ ನಡೆಯಿತು.

ಮೂಡುಬಿದಿರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ವೆಂಕಟಾಚಲಪತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT