ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಕಂಪಾಡಿ: ಋತುಸ್ರಾವ ಜಾಗೃತಿ

Published 28 ಮೇ 2024, 14:35 IST
Last Updated 28 ಮೇ 2024, 14:35 IST
ಅಕ್ಷರ ಗಾತ್ರ

ಮಂಗಳೂರು: ಅದಾನಿ ಫೌಂಡೇಷನ್‌ನ ಸುಪೋಶನ್ ಯೋಜನೆ ಅಡಿಯಲ್ಲಿ ಮುಟ್ಟಿನ ನೈರ್ಮಲ್ಯ ದಿನದ ಅಂಗವಾಗಿ ಮಹಿಳೆಯರು ಋತುಸ್ರಾವದ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಬೈಕಂಪಾಡಿ ಮೀನಕಳಿಯ ಪರಿಸರದಲ್ಲಿ ಮಾಹಿತಿ ನೀಡಲಾಯಿತು.

ಸುಪೋಶನ್ ಅಧಿಕಾರಿ ಪ್ರೇಮಾ ಡಿಸೋಜ ಮಾತನಾಡಿ, ಋತುಚಕ್ರದ ವೇಳೆ ಆರೋಗ್ಯ ಮತ್ತು ನೈರ್ಮಲ್ಯ ಕಾಳಜಿ ಅಗತ್ಯ. ಸಕಾಲದಲ್ಲಿ ಸ್ಯಾನಿಟರಿ ಪ್ಯಾಡ್‌ಗಳ ಬದಲಾವಣೆ, ಅವುಗಳ ಬಳಕೆ ಬಗ್ಗೆ ಅರಿವು ಇರಬೇಕು ಎಂದರು.

ಅಂಗನವಾಡಿ ಶಿಕ್ಷಕಿ ವೀಣಾ, ಬಬಿತಾ, ಸುನೀತಾ, ಸುಚಿತ್ರಾ ಹಾಗೂ ಸುಷ್ಮಾ, ಗಂಗಮ್ಮ, ಮಲ್ಲಿಕಾ ಭಾಗವಹಿಸಿದ್ದರು.


ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT