ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಜ್ಯೋತಿ ಲಕ್ಷ್ಮಿ ಕಾಕುಂಜೆ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಸತ್ಯನಾರಾಯಣ ಫ್ರೌಢಶಾಲಾ ಮುಖ್ಯೋಪಾಧ್ಯಾಯ ಕೇಶವ ಪ್ರಕಾಶ್ ಎನ್, ಆಡಳಿತ ಸಮಿತಿ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ, ಪ್ರೋಗ್ರಾಂ ಸಮಿತಿ ಅಧ್ಯಕ್ಷ ರಮೇಶ್ಚಂದ್ರ ರೈ ನಡುಬೈಲ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರವಿಚಂದ್ರ ಸೂರ್ಡೇಲು, ಕ್ಲಾಸ್ ಪಿಟಿಎ ಅಧ್ಯಕ್ಷರಾದ ಸುನಂದ ರೈ ಪೆರ್ಲ, ರಾಮಣ್ಣ ನಾಯ್ಕ್ ಬಜಕೂಡ್ಲು ಹಾಗೂ ಶಾಲಾ ನಾಯಕಿ ದಿಯಾ ಇದ್ದರು. ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಕೋಟೆ ಸ್ವಾಗತಿಸಿದರು. ಶಿಕ್ಷಕ ಉದಯ ಸಾರಂಗ್ ವಂದಿಸಿದರು. ಬೀವಿ ಟೀಚರ್ ನಿರೂಪಿಸಿದರು.