ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಹಾನಗರ ಘಟಕದ ವತಿಯಿಂದ ಬಲಿದಾನ್ ದಿವಸ್ ಟ್ರೋಫಿ– 2022 ತಾಲ್ಲೂಕು ಮಟ್ಟದ ಅಂತರ ಕಾಲೇಜು ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಲಾಲ್‌ಬಾಗ್‌ನ ಆಫೀಸರ್ ಕ್ಲಬ್‌ನಲ್ಲಿ ಬುಧವಾರ ಆಯೋಜಿಸಲಾಗಿತ್ತು.

ಈ ಕಬಡ್ಡಿ ಪಂದ್ಯಾಟ ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಕಿಶೋರ್ ಕುಮಾರ್ ಶುಭ ಹಾರೈಸಿದರು. ಮಂಗಳೂರು ತಾಲ್ಲೂಕಿನ ಒಟ್ಟು 25 ತಂಡಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನವನ್ನು ವಿಕಾಸ್ ಕಾಲೇಜ್, ದ್ವಿತೀಯ ಸ್ಥಾನವನ್ನು ಎಸ್‌ಡಿಎಂ ಪದವಿ ಕಾಲೇಜು ಹಾಗೂ ಮೂರನೇ ಸ್ಥಾನವನ್ನು ಪ್ರಯೋಜನ ಕಾಲೇಜ್ ಪಡೆದವು. ನಾಲ್ಕನೇ ಸ್ಥಾನವನ್ನು ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಪಡೆಯಿತು.

ಮಂಗಳೂರು ವಿಭಾಗ ಪ್ರಮುಖ ಕೇಶವ ಬಂಗೇರ, ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆ ಶ್ರೀಲಕ್ಷ್ಮಿ ಮಠದಮೂಲೆ, ರಾಜ್ಯ ಕಾರ್ಯಕಾರಣಿ ಸದಸ್ಯ ಪ್ರಣಮ್ ಶೆಟ್ಟಿ, ಮಂಗಳೂರು ವಿಭಾಗ ಸಂಚಾಲಕ ಹರ್ಷಿತ್ ಕೊಯಿಲ, ತಾಲ್ಲೂಕು ಸಂಚಾಲಕ ಶ್ರೇಯಸ್ ಶೆಟ್ಟಿ, ಮಹಾನಗರ ಘಟಕದ ಅಧ್ಯಕ್ಷೆ ಭಾರತಿ ಪ್ರಭು, ಕಾರ್ಯದರ್ಶಿಯಾದ ಆದಿತ್ಯ ಶೆಟ್ಟಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.