ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ಯನಡ್ಕ: ಕರ್ಣಾಟಕ ಬ್ಯಾಂಕ್ ಶಾಖೆಯಿಂದ ಭಾರಿ ಪ್ರಮಾಣದ ಚಿನ್ನಾಭರಣ ಕಳವು

Published 8 ಫೆಬ್ರುವರಿ 2024, 7:26 IST
Last Updated 8 ಫೆಬ್ರುವರಿ 2024, 7:26 IST
ಅಕ್ಷರ ಗಾತ್ರ

ವಿಟ್ಲ (ದಕ್ಷಿಣ ಕನ್ನಡ): ಇಲ್ಲಿಗೆ ಸಮೀಪದ ಅಡ್ಯನಡ್ಕದಲ್ಲಿ ಕರ್ನಾಟಕ ಬ್ಯಾಂಕ್ ಶಾಖಾ ಕಚೇರಿಯಿಂದ ಬುಧವಾರ ರಾತ್ರಿ ಭಾರಿ ಪ್ರಮಾಣದ ನಗ ನಗದು ಕಳವಾಗಿದೆ.

ಕಿಟಕಿಯ ಸರಳುಗಳನ್ನು ಕತ್ತರಿಸಿ ಕಟ್ಟಡದೊಳಗೆ ನುಗ್ಗಿದ ಕಳ್ಳರು ಹಣ-ಒಡವೆ ಕದ್ದೊಯ್ದಿದ್ದಾರೆ. ಕಳವು ಕೃತ್ಯ ನಡೆದಿರುವುದು ಗುರುವಾರ ಬೆಳಿಗ್ಗೆ ಗೊತ್ತಾಗಿದೆ.

ಸುಮಾರು 20 ವರುಷ ಹಳೆಯ ಕಟ್ಟಡದಲ್ಲಿ ಈ ಬ್ಯಾಂಕ್ ಶಾಖೆ ಕಾರ್ಯಾಚರಿಸುತ್ತಿತ್ತು. ಕಟ್ಟಡದ ಸುತ್ತಲೂ ಕಾಡು-ಪೊದೆಗಳೆ ಆವರಿಸಿಕೊಂಡಿತ್ತು. ಕಟ್ಟಡದ ಸುರಕ್ಷತೆ ಬಗ್ಗೆ ಮುಂಜಾಗ್ರತೆ ವಹಿಸದ ಬಗ್ಗೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT