ಬಂಟ್ವಾಳ: ದೇಶದಲ್ಲಿ ಪೋಲಿಯೊ ನಿರ್ಮೂಲನೆ ಮಾದರಿಯಲ್ಲಿ ಕೋವಿಡ್ ಎದುರಿಸಲು ರೋಟರಿ ಕ್ಲಬ್ ಸದಸ್ಯರು ಸರ್ಕಾರ ಮತ್ತು ಜನರೊಂದಿಗೆ ಕೈ ಜೋಡಿಸಬೇಕು. ಇದಕ್ಕಾಗಿ ಸರ್ಕಾರಿ ಆಸ್ಪತ್ರೆ ಮತ್ತಿತರ ಕಡೆಗಳಲ್ಲಿ ಬಡ ರೋಗಿಗಳು ಮತ್ತು ಆರೈಕೆದಾರರಿಗೆ ಸ್ಪಂದಿಸಬೇಕು ಎಂದು ಪೂರ್ವ ಜಿಲ್ಲಾ ಗವರ್ನರ್ ಡಾ. ನಾಗಾರ್ಜುನ್ ಹೇಳಿದರು.

ಇಲ್ಲಿನ ಬಿ.ಸಿ.ರೋಡು ರೋಟರಿ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ರೋಟರಿ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು. ನಿರ್ಗಮಿತ ಅಧ್ಯಕ್ಷ ನಾರಾಯಣ ಹೆಗ್ಡೆ ಮಾತನಾಡಿ, ಕಳೆದ ಅವಧಿಯಲ್ಲಿ ಕ್ಲಬ್‌ಗೆ ಜಿಲ್ಲಾ ಮಟ್ಟದ ಪ್ರಶಸ್ತಿ ದೊರೆತಿದೆ ಎಂದರು. ದಾನಿ ಮಂಜುನಾಥ ಆಚಾರ್ಯ ಮತ್ತು ಮೇಘಾ ಆಚಾರ್ಯ ಮತ್ತಿತರರನ್ನು ಅಭಿನಂದಿಸಲಾಯಿತು.

ನೂತನ ಅಧ್ಯಕ್ಷ ಮಹಮ್ಮದ್ ವಳವೂರು, ಕಾರ್ಯದರ್ಶಿ ಧನಂಜಯ ಬಾಳಿಗ, ಕೋಶಾಧಿಕಾರಿ ಬೇಬಿ ಕುಂದರ್ ಅಧಿಕಾರ ಸ್ವೀಕರಿಸಿದರು. ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣೆ, ನೀರು ಶುದ್ಧೀಕರಣ ಯಂತ್ರ ಹಸ್ತಾಂತರಿಸಲಾಯಿತು. ನೂತನ ಸದಸ್ಯರಾಗಿ ಅಜಿತ್ ಶೆಟ್ಟಿ ಸೇರ್ಪಡೆಗೊಂಡರು.

ಸಹಾಯಕ ಗವರ್ನರ್ ಸುರೇಂದ್ರ ಕಿಣಿ, ಪ್ರಮುಖರಾದ ಎನ್.
ಪ್ರಕಾಶ ಕಾರಂತ, ವಾಣಿ ಕಾರಂತ್, ಮುಸ್ತಾಫ ಗೋಳ್ತಮಜಲು, ವಸಂತ ಪ್ರಭು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.