ಬೆಳ್ತಂಗಡಿ/ಮಂಗಳೂರು: ಪಾಸ್ಖ ಗುರುವಾರ ಎಂದು ಕರೆಯಲಾಗುವ ಪವಿತ್ರ ಗುರುವಾರದ ಅಂಗವಾಗಿ ಮಂಗಳೂರು ನಗರವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಚರ್ಚ್ಗಳಲ್ಲಿ ಧರ್ಮಗುರುಗಳು ‘ಪಾದ ತೊಳೆಯುವ’ ಕಾರ್ಯ ಕೈಗೊಂಡರು.

ಮಂಗಳೂರಿನ ರೊಸಾರಿಯೊ ಚರ್ಚ್ನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಫಾ.ಪೀಟರ್ ಪೌಲ್ ಸಲ್ಡಾನ 12 ಮಂದಿಯ ಪಾದ ತೊಳೆಯುವ ಕಾರ್ಯ ನೆರವೇರಿಸಿದರು. ವಿಶೇಷ ಬಲಿಪೂಜೆಯನ್ನೂ ಅವರು ನೆರವೇರಿಸಿದರು.

ಬೆಳ್ತಂಗಡಿಯ ಸೇಂಟ್ ಲಾರೆನ್ಸ್ ಪ್ರಧಾನ ದೇವಾಲಯ ಸೇರಿದಂತೆ ಬೆಳ್ತಂಗಡಿ ಧರ್ಮಪ್ರಾಂತ್ಯದ 55 ಚರ್ಚ್ಗಳಲ್ಲಿ ಬೆಳಿಗ್ಗೆ ಬಲಿಪೂಜೆಯೊಂದಿಗೆ ವಿಧಿವಿದಾನಗಳು ನೆರವೇರಿದವು.

ಸೇಂಟ್ ಲಾರೆನ್ಸ್ ದೇವಾಲಯದಲ್ಲಿ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ ಅವರು ಬಲಿಪೂಜೆಯನ್ನು ಅರ್ಪಿಸಿದರು. ಯೇಸು ಕ್ರಿಸ್ತ 12 ಮಂದಿ ಶಿಷ್ಯರ ಪಾದಗಳನ್ನು ತೊಳೆದ ಕಾರ್ಯದ ಸಂಕೇತವಾಗಿ ಧರ್ಮಾಧ್ಯಕ್ಷರು 12 ಜನರ ಪಾದ ತೊಳೆದರು. ಫಾದರ್ ಕುರಿಯಾಕೋಸ್ ವೆಟ್ಟುವಯಿ ಪ್ರವಚನ ನೀಡಿದರು. ಫಾ.ತೋಮಸ್ ಕಣ್ಣಾಂಙಲ್, ಫಾ.ಲಾರೆನ್ಸ್ ಪುಣೋಳಿಲ್, ಫಾ.ಜೋಸೆಫ್ ಮಟ್ಟಂ, ಫಾ.ಅಬ್ರಹಾಂ ಪಟ್ಟೇರಿಲ್, ಫಾ.ಜೋಬಿ ಪುಲ್ಲಾಟ್ಟ್, ಫಾ.ಜೋಸೆಫ್ ಒಸಿಡಿ, ಫಾ.ಜಾರ್ಜ್ ಒಸಿಡಿ, ಫಾ.ಜೋಸೆಫ್ ಪುತ್ತೇಟ್ಟುಪಡವಿಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.