ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಲ್ಲವ ಗಾನ ತರಂಗ’: ಬಹುಮಾನ ವಿತರಣೆ

Last Updated 28 ಜುಲೈ 2020, 15:21 IST
ಅಕ್ಷರ ಗಾತ್ರ

ಮಂಗಳೂರು: ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ತಂಡವು ಸಾಮಾಜಿಕ ಜಾಲತಾಣದ ಮೂಲಕ ತೆರೆಮರೆಯ ಪ್ರತಿಭೆಗಳನ್ನು ಪರಿಚಯಿಸಿ, ಆ ಮೂಲಕ ಅವರ ಬೆಳವಣಿಗೆಗೆ ಕಾರ್ಯೋನ್ಮುಖವಾಗಿರುವುದು ಸಂತಸದ ವಿಷಯ. ಕೋವಿಡ್‌–19 ಸಮಯದಲ್ಲಿ ಒಳ್ಳೆಯ ಚಿಂತನೆಯ ಮೂಲಕ ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕಾಗಿದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್.ಪದ್ಮರಾಜ್ ಹೇಳಿದರು.

ಕುದ್ರೋಳಿ ದೇವಸ್ಥಾನದಲ್ಲಿ ನಡೆದ ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮದ ‘ಬಿಲ್ಲವ ಗಾನ ತರಂಗ’ ಸೀಸನ್-1 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಂಗಕರ್ಮಿ, ಸಾಹಿತಿ ಪರಮಾನಂದ ಸಾಲ್ಯಾನ್ ಮಾತನಾಡಿ, ಸಾಮಾಜಿಕ ಜಾಲತಾಣದ ಮೂಲಕ ಪ್ರತಿಭೆಗಳಿಗೆ ಒತ್ತು ನೀಡಿ, ಅವರನ್ನು ಬೆಳಕಿಗೆ ಬರುವ ಕೆಲಸ ಸಾರ್ಥಕವಾಗಿದೆ. 94 ಸ್ಪರ್ಧಿಗಳಲ್ಲಿ ಅಂತಿಮ ಆಯ್ಕೆ ಕಷ್ಟದ ಕೆಲಸ. ವಿಶ್ವವ್ಯಾಪಿ ಈ ಎಲ್ಲ ಸ್ಪರ್ಧಿಗಳನ್ನು ಪರಿಚಯಿಸಿದ ಕಾರ್ಯ ಶ್ಲಾಘನೀಯ ಎಂದರು.

ರೆಡಿಯೊ ಜಾಕಿ ರಶ್ಮಿ ಉಳ್ಳಾಲ್, ಮಂಗಳೂರು ವಿಶ್ವವಿದ್ಯಾಲಯದ ನಾರಾಯಣ ಗುರು ಅಧ್ಯಯನಪೀಠದ ಸಲಹಾ ಸಮಿತಿ ಸದಸ್ಯೆ ನಮಿತಾ ಶ್ಯಾಮ್ ಮಾತನಾಡಿದರು. ಬಿರುವೆರ್ ಕುಡ್ಲ ಮೂಡುಬಿದಿರೆ ಘಟಕದ ರಾಜ್ ಪವಿ ಬಿಲ್ಲವ ಇದ್ದರು.

ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 98.5 ಅಂಕ ಪಡೆದ ನಿರೀಕ್ಷಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ನಿರ್ಮಾಣದ ‘ಗೆಜ್ಜೆಗಿರಿತ ಮಾಣಿಕ್ಯ ಅಪ್ಪೆ ದೇಯಿಬೈದೆದಿ ಸುಗಿಪು’ ಧ್ವನಿಸುರುಳಿಯಲ್ಲಿ ಹಾಡಿದ ವಾತ್ಸಲ್ಯ ಪೂಜಾರಿಯನ್ನು ಗೌರವಿಸಲಾಯಿತು.

ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮದ ಪದಾಧಿಕಾರಿಗಳಾದ ದಿನೇಶ್ ಸುವರ್ಣ ರಾಯಿ, ಶಿವಕುಮಾರ್ ಮರಕ್ಕೂರು, ಶ್ರೇಯಸ್, ಅನುಪ್ ಇದ್ದರು. ರೇಣುಕ ಕಣಿಯೂರು ಸ್ವಾಗತಿಸಿದರು. ಅಜಿತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚ್ಚೇಂದ್ರ ಅಂಬಾಗಿಲು ನಿರೂಪಿಸಿದರು. ದೀಪಕ್ ಬೀರ ವಂದಿಸಿದರು.

ವಿಜೇತರು: ಲಹರಿ ಕೋಟ್ಯಾನ್ (ಪ್ರಥಮ), ರಂಜಿತ್ ಪೂಜಾರಿ ಮೊಗರು (ದ್ವಿತೀಯ), ಅನುರಾಧಾ ಚಂದ್ರೇಶ್ (ತೃತೀಯ), ಸಚಿನ್ ಪೂಜಾರಿ, ನಿಶ್ಮಿತಾ, ಸಂತೋಷ್ ಪೂಜಾರಿ, ಸಹನಾ ಕರ್ಕೇರ (ಸಮಾಧಾನಕರ ಬಹುಮಾನ), ಆದಿತ್ಯ ಕರ್ಕೇರ (ಬೆಸ್ಟ್ ರಾಕ್ ಮೆಲೋಡಿ) ಬಹುಮಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT