ಬಂಟ್ವಾಳ: ‘ಎಂಟು ವರ್ಷಗಳಿಂದ ಪಾರದರ್ಶಕ ಆಡಳಿತ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ಮತ್ತು ವಂಶಾಡಳಿತಕ್ಕೆ ತಡೆ ಹಾಕಿದ್ದು ದೇಶದಲ್ಲಿ ಭಯೋತ್ಪಾದನೆ ಮತ್ತು ನಕ್ಸಲರ ಕಾಟಕ್ಕೆ ಕಡಿವಾಣ ಬಿದ್ದಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ಬಿಜೆಪಿ ಯುವಮೋರ್ಚಾ ಘಟಕಬಿ.ಸಿ.ರೋಡ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಕಾಸ್ ತೀರ್ಥ ಬೈಕ್ ರ್‍ಯಾಲಿಯ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡಿದರು.
‘ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಿದಾಗ ಒಟ್ಟು 22 ಸಾವಿರ ಮಂದಿ ಭಾರತೀಯರು ಮತ್ತು ಇತರ ರಾಷ್ಟ್ರಗಳ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಭಾರತಕ್ಕೆ ಸಾಧ್ಯವಾಗಿದೆ. ಅಯೋಧ್ಯೆ, ಕಾಶಿಯ ದೇವಾಲಯಗಳ ಪುನರ್ನಿರ್ಮಾಣ, ಅರಬ್ ರಾಷ್ಟ್ರದಲ್ಲಿ 22 ಎಕರೆ ಪ್ರದೇಶದಲ್ಲಿ ಗಣಪತಿ ದೇವಾಲಯ ನಿರ್ಮಾಣ ಮುಂತಾದ ಕಾರ್ಯಗಳ ಮೂಲಕ ಮೋದಿ ಗಮನ ಸೆಳೆದಿದ್ದಾರೆ’ ಎಂದು ಹೇಳಿದರು.
‘ಕಾಂಗ್ರೆಸ್‌ನ ಕೇಂದ್ರ ಮತ್ತು ರಾಜ್ಯದ ನಾಯಕರ ಪೈಕಿ ಬಹುತೇಕರು ಜೈಲ್ ಮತ್ತು ಬೇಲ್‌ನಲ್ಲಿದ್ದು ಮುಂದಿನ ಚುನಾ ವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯುವ ಮೋರ್ಚಾ ರಾಜ್ಯ ಘಕಟದ ಅಧ್ಯಕ್ಷ ಸಂದೀಪ್ ಕುಮಾರ್, ಶಾಸಕ ರಾಜೇಶ್ ನಾಯ್ಕ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಮಾತನಾಡಿದರು. ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಗುರುದತ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿ ಕ್ಷೇತ್ರದ ತಲಾ 10 ಯುವ ಸಾಧಕರನ್ನು ಸನ್ಮಾನಿಸಲಾ ಯಿತು. ಮುಖಂಡರಾದ ರಾಮದಾಸ್ ಬಂಟ್ವಾಳ, ಸುಧೀರ್ ಶೆಟ್ಟಿ ಕಣ್ಣೂರು, ಕಸ್ತೂರಿ ಪಂಜ, ಸತೀಶ್ ಕುಂಪಲ, ಶ್ವೇತಾ ಕುಮಾರಿ, ಯಶವಂತ ಬೆಳಾಲು, ಭರತ್ ರಾಜ್ ಕೃಷ್ಣಾಪುರ, ಸಚಿನ್ ರಾಜ್ ರೈ, ಸಚಿನ್ ಮೋರೆ, ಸಚಿನ್ ಶೆಣೈ, ನವೀನ್, ಕೃಷ್ಣ ಎಂ.ಆರ್, ಅಶ್ವತ್ಥ್ ಪಣಪಿಲ ಇದ್ದರು. ಸುದರ್ಶನ್ ಬಜ ಸ್ವಾಗತಿಸಿ ದರು. ಸೂರಜ್ ಜೈನ್ ವಂದಿಸಿದರು. ಯತೀಶ್ ಶೆಟ್ಟಿ ನಿರೂಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.